- Advertisement -
- Advertisement -



ಪುತ್ತೂರು: ಮುಸ್ಲಿಂ ಯುವತಿಗೆ ಹಿಂದೂ ಯುವಕ ಆತನ ಬಳಿಯಿದ್ದ ಯಾವುದೋ ಹರಿತವಾದ ಆಯುಧದಿಂದ ಇರಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ದಿನಾಂಕ 20.08.2024 ರಂದು ಬೆಳಿಗ್ಗೆ, ಸಂತ್ರಸ್ಥ ಬಾಲಕಿಯು ತಾನು ವ್ಯಾಸಾಂಗ ಮಾಡುತ್ತಿರುವ ಪುತ್ತೂರಿನ ಕಾಲೇಜಿಗೆ ತೆರಳುತ್ತಿದ್ದಾಗ, ಬಾಲಕಿಯ ಹಿಂದುಗಡೆಯಿಂದ ಆಕೆಯ ಪರಿಚಯದ ಆರೋಪಿತನಾದ ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದ ಬಾಲಕನು ಹಿಂಬಾಲಿಸಿಕೊಂಡು ಬಂದು, ಬಾಲಕಿಯನ್ನು ಪ್ರೀತಿಸುತ್ತಿರುವ ವಿಚಾರದಲ್ಲಿ ಮಾತನಾಡಿದ್ದಾನೆ.
ಈ ವೇಳೆ ಬಾಲಕಿಯು ನಿರಾಕರಿಸಿದ್ದು, ಕೋಪಗೊಂಡ ಬಾಲಕನು ಆತನ ಬಳಿಯಿದ್ದ ಯಾವುದೋ ಹರಿತವಾದ ಆಯುಧದಿಂದ ಸಂತ್ರಸ್ಥೆಯ ಕೈಗೆ ತಿವಿದು ಪರಾರಿಯಾಗಿದ್ದು, ಗಾಯಗೊಂಡ ಬಾಲಕಿಯು ಪುತ್ತೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ದ.ಕ ಮಹಿಳಾ ಪೊಲೀಸ್ ಠಾಣೆಯಲ್ಲಿ ಅ.ಕ್ರ: 42/2024 ಕಲಂ: 78, 126(2), 118(1), 238 BNS 2023 ಮತ್ತು ಕಲಂ 12 ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲಾಗುತ್ತಿದೆ.
- Advertisement -