Monday, June 8, 2026
spot_imgspot_img
spot_imgspot_img

ವೇಶ್ಯಾವಾಟಿಕೆ ನಡೆಸುತ್ತಿದ್ದ ಖ್ಯಾತ ನಟಿ ಹಾಗೂ ಮಾಡೆಲ್ ಬಂಧನ

- Advertisement -
- Advertisement -

ಫೈವ್ ಸ್ಟಾರ್ ಹೋಟೆಲ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಖ್ಯಾತ ನಟಿ ಹಾಗೂ ಮಾಡೆಲ್ ಒಬ್ಬರನ್ನು ಬಂಧಿಸಿದ ಘಟನೆ ನಡೆದಿದೆ.

ಅಕ್ರಮ ಚಟುವಟಿಕೆಯ ಖಚಿತ ಮಾಹಿತಿ ಮೇರೆಗೆ ಪುಣೆಯ ವಾಕಡ್ ಏರಿಯಾದ ಫೈವ್ ಸ್ಟಾರ್ ಹೋಟೆಲ್ ಮೇಲೆ ದಾಳಿ ನಡೆಸಿದ ಪೊಲೀಸರು ಖ್ಯಾತ ಭೋಜ್ ಪುರಿ ನಟಿ ಮತ್ತು ಓರ್ವ ಮಾಡೆಲ್ ಹಾಗೂ ಏಜೆಂಟ್ ನನ್ನು ಬಂಧಿಸಿದ್ದಾರೆ. ಶುಕ್ರವಾರ ಸಂಜೆ ನಟಿಯ ಬಂಧನವಾಗಿದ್ದು, ಪಿಂಪ್ರಿ ಚಿಂಚವಾಡ್ ಕ್ರೈಂ ಬ್ರ್ಯಾಂಚ್ ತಂಡ ಈ ಕಾರ್ಯಚರಣೆ ನಡೆಸಿದೆ.

ಗ್ರಾಹಕರಿಂದ ಈ ನಟಿ ಒಂದು ರಾತ್ರಿಗೆ 25 ಸಾವಿರ ಹಾಗೂ ಮಧ್ಯಾಹ್ನದವರೆಗೆ 15 ಸಾವಿರ ರೂಪಾಯಿ ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿದೆ. ಅಮಾಯಕ ಮಹಿಳೆಯರಿಗೆ ಆಮಿಷ ಒಡ್ಡಿ ಈ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದರು ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಹೋಟೆಲ್ ಮೇಲೆ ದಾಳಿ ನಡೆಸಿದಾಗ ಖ್ಯಾತ ನಟಿ ಹಾಗೂ ಇಬ್ಬರು ದಂಧೆಯಲ್ಲಿ ತೊಡಗಿದ್ದಾಗಿ ಕಂಡು ಬಂದಿದ್ದಾರೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

- Advertisement -

Related news

error: Content is protected !!