Monday, June 30, 2025
spot_imgspot_img
spot_imgspot_img

ಖ್ಯಾತ ನಟಿ ಅಪರ್ಣಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ..!!

- Advertisement -
- Advertisement -

ಮಲಯಾಳಂ ನಟಿ ಅಪರ್ಣಾ ಪಿ ನಾಯರ್ (31)ತಿರುವನಂತಪುರಂನಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಗುರುವಾರ ಸಂಜೆ 7.50ರ ಸುಮಾರಿಗೆ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಆಗಲೇ ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಯಿತು. ಪೊಲೀಸರು ಇದೀಗ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಅಪರ್ಣಾ ಪಿ ನಾಯರ್ ಚಂದನಮಜ, ಆತ್ಮಸಖಿ, ಮೈಥಿಲಿ ವೀಂದುಂ ವರುಮ್ ಮತ್ತು ದೇವಸ್ಪರ್ಶಂನಂತಹ ಟಿವಿ ಶೋಗಳಿಗೆ ಹೆಸರುವಾಸಿಯಾಗಿದ್ದರು. ದೂರದರ್ಶನ ಕಾರ್ಯಕ್ರಮಗಳಲ್ಲಿ ಮಾತ್ರವಲ್ಲದೆ, ಮೇಘತೀರ್ಥಂ, ಮುತ್ತುಗೌ, ಅಚಾಯನ್ಸ್, ಕೊಡತಿ ಸಮಕ್ಷಮ್ ಬಾಲನ್ ವಕೀಲ್ ಮತ್ತು ಕಲ್ಕಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಪರ್ಣಾ ಅಭಿನಯಿಸಿದ್ದರು.

- Advertisement -

Related news

error: Content is protected !!