Saturday, May 4, 2024
spot_imgspot_img
spot_imgspot_img

ಬೆಕ್ಕು ಕಚ್ಚಿ ಅಪ್ಪ ಮಗ ಮೃತ್ಯು..!

- Advertisement -G L Acharya panikkar
- Advertisement -

ಮನೆಯ ಬೆಕ್ಕಿಗೆ ಹುಚ್ಚು ನಾಯಿಯೊಂದು ಕಚ್ಚಿತ್ತು ಬಳಿಕ ಈ ಬೆಕ್ಕು ತನ್ನ ಮಾಲೀಕರಿಬ್ಬರಿಗೆ ಕಚ್ಚಿದ ಒಂದು ವಾರದಲ್ಲಿ ತಂದೆ ಮತ್ತು ಮಗ ಡೆಡ್ಲಿ ರೆಬೀಸ್​ಗೆ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಕಾನ್ಪುರ ನಗರದ ಅಕ್ಬರ್ ಪುರದಲ್ಲಿ ಇವರ ನಿವಾಸ ಇತ್ತು. ಇವರು ಮನೆಯಲ್ಲಿ ಬೆಕ್ಕನ್ನು ತುಂಬಾ ಮುದ್ದಿನಿಂದ ಸಾಕಿದ್ದರು. ಕುಟುಂಬದ ಎಲ್ಲಾ ಸದಸ್ಯರೂ ಕೂಡ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಒಂದು ದಿನ ಆ ಬೆಕ್ಕಿ ಬೀದಿ ನಾಯಿಯೊಂದು ಕಚ್ಚಿತ್ತು. ಕಚ್ಚಿದ್ದ ಕೆಲವೇ ದಿನಗಳಲ್ಲಿ ಆ ಬೆಕ್ಕಿನ ದೇಹದಲ್ಲಿ ರೇಬಿಸ್ ಲಕ್ಷಗಳು ಕಾಣಿಸಿಕೊಂಡಿದ್ದವು.

ಎಂದಿನಂತೆ ಬೆಕ್ಕಿನ ಜೊತೆ ಮನೆಯ ಸದಸ್ಯರು ಆಟವಾಡುತ್ತಿರುವಾಗ ಒಂದು ದಿನ ಅದು ತನ್ನ ಮಾಲೀಕನ ಮಗನಿಗೆ ಗಾಯಮಾಡಿತ್ತು. ಕೆಲ ದಿನಗಳ ಬೆನ್ನಲ್ಲೇ ಆತನ ಆರೋಗ್ಯ ಹದಗೆಡಲು ಶುರುವಾಯಿತು. ಕೊನೆ ಕೊನೆಗೆ ಆತ ಬೆಕ್ಕಿನ ಹಾಗೆಯೇ ವರ್ತಿಸಲು ಶುರುಮಾಡಿದ್ದ. ಕೊನೆಗೆ ಆತ ಮೃತಪಟ್ಟಿದ್ದ. ಮಗ ಮೃತಪಟ್ಟು ದಿನ ಕಳೆಯುವಷ್ಟರಲ್ಲಿ ತಂದೆಗೂ ಕೂಡ ಅದೇ ಪರಿಸ್ಥಿತಿ ಎದುರಾಯ್ತು. ಅವರೂ ಕೂಡ ರೇಬಿಸ್​​ನಿಂದ ಸಾವನ್ನಪ್ಪಿದರು.

ಈ ವಿಚಾರ ಸ್ಥಳೀಯರಿಗೆ ಗೊತ್ತಾಗುತ್ತಿದ್ದಂತೆ ಬೆಚ್ಚಿಬಿದ್ದಿದ್ದಾರೆ. ಅವರ ಮನೆಗೆ ಯಾರೂ ಭೇಟಿ ನೀಡುತ್ತಿಲ್ಲ. ಜೊತೆಗೆ ಆ ಪ್ರದೇಶದಲ್ಲಿ ಓಡಾಡೋದಕ್ಕೂ ಅಂಜುತಿದ್ದರು. ಸದ್ಯ ಉಳಿದಿರುವ ಅವರ ಕುಟುಂಬಸ್ಥರನ್ನು ಕಾನ್ಪುರಕ್ಕೆ ಕಳುಹಿಸಲಾಗಿದೆ. ಅವರೆಲ್ಲರೂ ಸುರಕ್ಷಿತವಾಗಿದ್ದಾರೆ. ಹಿರಿಯ ವೈದ್ಯಾಧಿಕಾರಿ ಅಮಿತ್ ಕಟಿಯಾರ್ ನಾವು ಸಾಕಿದ ಪ್ರಾಣಿಗಳಿಗೆ ಆಟಿ ರೇಬಿಸ್​ ಇಂಜೆಕ್ಷನ್​ಗಳನ್ನು ಹಾಕಿಸಲೇಬೇಕು. ಸಾಕು ಪ್ರಾಣಿಗಳು ಮನೆಯ ಸದಸ್ಯರಿಗೆ ಕಚ್ಚಿದರೆ ಕೂಡಲೇ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಳ್ಳಬೇಕು ಎಂದಿದ್ದಾರೆ.

- Advertisement -

Related news

error: Content is protected !!