Saturday, June 6, 2026
spot_imgspot_img
spot_imgspot_img

ಬಿಹಾರದ ವಿದ್ಯಾರ್ಥಿಗೆ ಸನ್ನಿ ಲಿಯೋನ್ ಅಮ್ಮ, ಇಮ್ರಾನ್ ಹಶ್ಮಿ ಅಪ್ಪ!!

- Advertisement -
- Advertisement -

ಪಾಟ್ನ: ಬಿಹಾರದ ಡಾ. ಭೀಮರಾವ್ ಅಂಬೇಡ್ಕರ್ ವಿಶ್ವ ವಿದ್ಯಾಲಯಕ್ಕೆ ಒಳಪಟ್ಟ ಕಾಲೇಜಿನ ಕಲಾ ಪದವಿ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಹೆತ್ತವರ ಕುರಿತ ಮಾಹಿತಿಯಲ್ಲಿ ಇಮ್ರಾನ್ ಹಶ್ಮಿ ಮತ್ತು ಸನ್ನಿ ಲಿಯೋನ್ ಹೆಸರು ಬರೆದಿದ್ದಾನೆ.

ವಿಶ್ವ ವಿದ್ಯಾಲಯದ ಅಧಿಕಾರಿಗಳು ಪರೀಕ್ಷೆ ಸಂಬಂಧ ವಿದ್ಯಾರ್ಥಿ ಕಳುಹಿಸಿದ ಮಾಹಿತಿ ಪರಿಶೀಲಿಸಿದಾಗ ಇದು ಬೆಳಕಿಗೆ ಬಂದಿದೆ. ಇಮ್ರಾನ್ ಹಶ್ಮಿ ಹೆಸರಿನಲ್ಲಿ ಅಕ್ಷರ ತಪ್ಪುಗಳು ಕೂಡ ಇವೆ. ಮೀನಾಪುರದ ಧನ್ ರಾಜ್ ಮಹತೋ ಕಾಲೇಜಿನ ಕುಂದನ್ ಕುಮಾರ್ ಈ ರೀತಿ ಚಿತ್ರ ವಿಚಿತ್ರ ಮಾಹಿತಿ ನೀಡಿದ್ದಾನೆ ಎಂದು ವರದಿಯಾಗಿದೆ.

ಇದು ಉದ್ದೇಶ ಪೂರ್ವಕವಾಗಿ ಮಾಡಿದ ಕೃತ್ಯ ಎಂಬ ಸಂಶಯ ತಲೆದೋರಿದೆ. ಕುಂದನ್ ಕುಮಾರ್ ಬಿ ಎ ದ್ವಿತೀಯ ವರ್ಷ ಪದವಿ ವಿದ್ಯಾರ್ಥಿಯಾಗಿದ್ದಾನೆ.

- Advertisement -

Related news

error: Content is protected !!