Saturday, June 13, 2026
spot_imgspot_img
spot_imgspot_img

ಮೂರನೇ ಹೆಂಡತಿಗೆ ಇಷ್ಟವಿಲ್ಲವೆಂದು ಸ್ವಂತ ಮಗನನ್ನೇ ಕತ್ತು ಹಿಸುಕಿ ಕೊಲೆಗೈದ ಪಾಪಿ ತಂದೆ

- Advertisement -
- Advertisement -

ಏಳು ವರ್ಷದ ಮಗನನ್ನು ಮೂರನೇ ಹೆಂಡತಿಯ ಒತ್ತಡದಿಂದ ತಂದೆಯೇ ಕತ್ತು ಹಿಸುಕಿ ಹತ್ಯೆ ಮಾಡಿದ ಘಟನೆ ನಡೆದಿದ್ದು ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ. ಮೂರನೇ ತರಗತಿ ವಿದ್ಯಾರ್ಥಿ ಪ್ರತೀಕ್ ಮೃತಪಟ್ಟ ಬಾಲಕ. ಶಶಿಪಾಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರತೀಕ್ ಸಾಮಾನ್ಯವಾಗಿ ಅಜ್ಜಿಯೊಂದಿಗೆ ಮಲಗುತ್ತಿದ್ದವನು ಅಂದು ತಂದೆಯ ರೂಮಿನಲ್ಲಿ ಕೂಲರ್ ಇದೆ ಹೀಗಾಗಿ ನಾನು ಎಲ್ಲಿಯೇ ಮಲಗುತ್ತೇನೆಎಂದು ಹೇಳಿ ಹೋಗಿದ್ದ. ಅದೇ ಕೊನೆಯ ಬಾರಿ ಬಾಲಕನನ್ನು ಜೀವಂತವಾಗಿ ನೋಡಿದ ಕ್ಷಣ.

ಪೊಲೀಸರ ಪ್ರಕಾರ, ಮಗ ಮಲಗಿದ್ದಾಗ ಶಶಿಪಾಲ್ ಟಿವಿ ವಾಲ್ಯೂಮ್ ಹೆಚ್ಚಿಸಿ ಕತ್ತು ಹಿಸುಕಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ, ಪತ್ನಿಗೆ ವಿಡಿಯೋ ಕಾಲ್ ಮಾಡಲು ಯತ್ನಿಸಿದ್ದ ಆದರೆ ಆಕೆ ತೆಗೆದಿರಲಿಲ್ಲ. ಮಗನನ್ನು ಕೊಂದ ನಂತರ, ಶಶಿಪಾಲ್ ತನ್ನ ಮೂರನೇ ಹೆಂಡತಿ ಪಾಯಲ್‌ಗೆ ವಾಟ್ಸಾಪ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾನೆ, ಆದರೆ ಆಕೆ ಗಂಡನ ಮೊಬೈಲ್ ನಂಬರ್ ಬ್ಲಾಕ್​ ಮಾಡಿದ್ದರಿಂದ ಅದನ್ನು ನೋಡಲು ಸಾಧ್ಯವಾಗಲಿಲ್ಲ.

ಮಗನನ್ನು ಕೊಂದ ಬಳಿಕ ತಂದೆ ಆತ ಓಡಿ ಹೋಗಿದ್ದ, ಅಂತಿಮವಾಗಿ ಶಶಿಪಾಲ್ ಹಾಗೂ ಆತನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಮುಂದೆ ಎಂದೂ ನನ್ನ ಮಗ ತೊಂದರೆ ಕೊಡುವುದಿಲ್ಲ ಎಂದು ಹೇಳಿ ಪತ್ನಿಗೆ ವಿಡಿಯೋ ಹಾಗೂ ಸಂದೇಶ ಕಳುಹಿಸಿದ್ದೆ ಎಂದು ಶಶಿಪಾಲ್ ಹೇಳಿದ್ದಾನೆ. ಪಾಯಲ್ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದಳು ಪ್ರತೀಕ್​ನನ್ನು ಮನೆಯಿಂದ ಹೊರಹಾಕುವವರೆಗೂ ತಾನು ಆ ಮನೆಗೆ ಹಿಂದಿರುಗುವುದಿಲ್ಲ ಎಂದು ಶಶಿಪಾಲ್​ಗೆ ತಿಳಿಸಿದ್ದಳು.

ಶಶಿಪಾಲ್​ನ ಮೂರನೇ ಹೆಂಡತಿ ಮೊದಲಿನಿಂದಲೂ ಪ್ರತೀಕ್​ ಬಗ್ಗೆ ಅಸಮಾಧಾನ ಹೊಂದಿದ್ದಳು, ಈ ಬಗ್ಗೆ ಆಗಾಗ ಅವರ ನಡುವೆ ಜಗಳವೂ ನಡೆಯುತ್ತಿತ್ತು. ಆದರೆ ಈ ಅಪರಾಧಕ್ಕೂ ನನಗೂ ಯಾವುದೇ ಸಂಬಂಧವಿಲ್ಲ, ಮಗನನ್ನು ಹತ್ಯೆ ಮಾಡಿ ಎಂದು ನಾನು ಎಂದೂ ಹೇಳಿಲ್ಲ ಎಂದು ಪಾಯಲ್ ಹೇಳಿದ್ದಾಳೆ.

- Advertisement -

Related news

error: Content is protected !!