Monday, April 29, 2024
spot_imgspot_img
spot_imgspot_img

ವಿಟ್ಲ: (ಫೆ:18) ಕುಲಾಲ ಸಂಘ (ರಿ.), ವಿಟ್ಲ ಇದರ ನೂತನ ಸಭಾಭವನ “ಕುಲಾಲ ರಜತ ಭವನ” ಉದ್ಘಾಟನೆ, ಬೆಳ್ಳಿಹಬ್ಬ ಸಂಭ್ರಮ, ವಾರ್ಷಿಕೋತ್ಸವದ ಪ್ರಯುಕ್ತ ವಿಟ್ಲ ಕುಲಾಲ ರಜತ ಟ್ರೋಫಿ – 2024

- Advertisement -G L Acharya panikkar
- Advertisement -

ವಿಟ್ಲ: ಕುಲಾಲ ಸಂಘ (ರಿ.), ವಿಟ್ಲ ಇದರ ನೂತನ ಸಭಾಭವನ “ಕುಲಾಲ ರಜತ ಭವನ” ಉದ್ಘಾಟನೆ, ಬೆಳ್ಳಿಹಬ್ಬ ಸಂಭ್ರಮ, ವಾರ್ಷಿಕೋತ್ಸವದ ಪ್ರಯುಕ್ತ ವಿಟ್ಲ ಕುಲಾಲ ರಜತ ಟ್ರೋಫಿ – 2024 ಉಡುಪಿ, ದಕ್ಷಿಣಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಸ್ವಜಾತಿ ಬಾಂಧವರ ಮತ್ತು ಮಕ್ಕಳ ಕ್ರೀಡೋತ್ಸವವು 18-02-2024ನೇ ಅದಿತ್ಯವಾರ ಬೆಳಗ್ಗೆ ಗಂಟೆ 09:00ಕ್ಕೆ ವಿಠಲ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ.

ಈ ಸಮಾರಂಭದ ಉದ್ಘಾಟನೆಯನ್ನು ಗೋಪಾಲ ಕುಲಾಲ್ ಸಾಲೆತ್ತೂರು, ಉಪ ವಿಭಾಗೀಯ ಅಭಿಯಂತರರು, Rtd. BSNL Mangalore ಇಬರು ನಡೆಸಲಿರುವರು, ಪೂವಪ್ಪ ಮೂಲ್ಯ, ಬಾಲೆಕುಮೇರಿ ಪುಣಚ ಇವರು ಕಾರ್ಯಕ್ರಮದ ದೀಪಪ್ರಜ್ವಲನೆಯನ್ನು ಮಾಡಲಿದ್ದಾರೆ. ಬಿ. ಕೆ. ಬಾಬು, ಅಧ್ಯಕ್ಷರು, ಕುಲಾಲ ಸಂಘ (ರಿ.) ವಿಟ್ಲ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ ವೇದಿಕೆಯಲ್ಲಿ ಅತಿಥಿಗಳಾಗಿ ಲಾವಣ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕೊಳ್ಳಾಡು ಗ್ರಾಮ ಪಂಚಾಯತ್ ,ರಾಜೀವಿ M.K, ಕುಲಾಲ್ ಇರಂದೂರು, ಮಹಿಳಾ ಘಟಕದ ಸ್ಥಾಪಕಾಧ್ಯಕ್ಷರು , ಇಂದುಶೇಖರ್, ದೈಹಿಕ ಶಿಕ್ಷಕರು, ಹಿ.ಪ್ರಾ.ಶಾಲೆ ಕುಳಾಲು ಭಾಗವಹಿಸಲಿರುವರು. ರಮಾನಾಥ ವಿಟ್ಲ ಗೌರವಾಧ್ಯಕ್ಷರು, ಬೆಳ್ಳಿಹಬ್ಬ ಸಮಿತಿ ಇವರ ಗೌರವ ಉಪಸ್ಥಿತಿಯಲ್ಲಿ ಸಮಾರಂಭವು ನಡೆಯಲಿರುವುದು.

ಸಂಜೆ ಗಂಟೆ 4.30ಕ್ಕೆ ಬಿ. ಕೆ. ಬಾಬು, ಅಧ್ಯಕ್ಷರು, ಕುಲಾಲ ಸಂಘ (ರಿ.) ವಿಟ್ಲ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಾ| ಕೆ. ಚಂದ್ರಶೇಖರ ಪ್ರಾಧ್ಯಾಪಕರು ಸಂತ ಫಿಲೋಮಿನಾ ಕಾಲೇಜು ಪುತ್ತೂರು, ಮಹೇಶ್ ಸವಣೂರು ನ್ಯಾಯಾವಾದಿಗಳು ಪುತ್ತೂರು, ವಿಶ್ವನಾಥ ಕುಲಾಲ್ ಅಳಿಕೆ, ಸಿ.ಎ. ಅಭಿನಯ ಕುಲಾಲ್‌ Chartered Accountant, Santhekatte Belthangady, ವಿರಾಜ್ ಕುಲಾಲ್, ಸುಚಿತ್ರಾ ರಮಾನಾಥ ವಿಟ್ಲ, ಅಧ್ಯಕ್ಷರು, ಕುಲಾಲ ಮಹಿಳಾ ಘಟಕ ವಿಟ್ಲ ಭಾಗವಹಿಸಲಿರುವರು

ವಿ.ಸೂ.:

  • 1ರಿಂದ 10ನೇ ತರಗತಿಯ ಬಾಲಕ-ಬಾಲಕಿಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಗುವುದು.
  • 16-02-2024ರ ಒಳಗೆ Team Fees ಕೊಟ್ಟು, ತಂಡದ ಹೆಸರು ನೋಂದಾಯಿಸಬೇಕು
  • ಪುರುಷರ ವಾಲಿಬಾಲ್, ಕಬಡ್ಡಿ, ಹಗ್ಗಜಗ್ಗಾಟ ಪ್ರತೀ ತಂಡದ ಪ್ರವೇಶ ಶುಲ್ಕ 500/- ಮತ್ತು ಮಹಿಳೆಯರ ಹಗ್ಗಜಗ್ಗಾಟ, ತ್ರೋಬಾಲ್ ಪ್ರತೀ ತಂಡದ ಪ್ರವೇಶ ಶುಲ್ಕ 250/-
  • 17-02-2024ರಂದು ವಾಲಿಬಾಲ್ ಮತ್ತು ಕಬಡ್ಡಿಗೆ ಲಾಟ್ಸ್ ಎತ್ತಲಾಗುವುದು.
  • ಸ್ವಜಾತಿ ಬಾಂಧವರಿಗೆ ಮಾತ್ರ ಅವಕಾಶ ಕುಲಾಲ ಬಾಂಧವರೆಂದು ದೃಢೀಕರಣಕ್ಕಾಗಿ ಆಧಾ‌ರ್ ಕಾರ್ಡನ್ನು ಒದಗಿಸುವುದು.
  • ತೀರ್ಪುಗಾರರ ತೀರ್ಮಾನವೇ ಅಂತಿಮ.
    ಹೆಚ್ಚಿನ ಮಾಹಿತಿಗಾಗಿ : 9901359613, 9449469115

ಸ್ವಜಾತಿ ಭಾಂದವರೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಅಧ್ಯಕ್ಷರು ಮತ್ತು ಕಾರ್ಯಕಾರಿ ಸದಸ್ಯರು ಕುಲಾಲ ಸಂಘ (ರಿ.) ವಿಟ್ಲ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!