Friday, May 23, 2025
spot_imgspot_img
spot_imgspot_img

ವಾಣಿಜ್ಯ ವಾಹನಗಳ ನೋಂದಣಿ ಶುಲ್ಕ ಮೇ.1 ರಿಂದ ಏರಿಕೆ

- Advertisement -
- Advertisement -

ನಿರ್ಮಾಣ ವಲಯದಲ್ಲಿ ಬಳಸುವ ಮತ್ತು 10 ಲಕ್ಷ ರೂ. ಒಳಗಿನ ವಾಣಿಜ್ಯ ವಾಹನಗಳ ನೋಂದಣಿ ಶುಲ್ಕ ಮೇ 1 ರಿಂದ ಏರಿಕೆಯಾಗಲಿದೆ.

ವಾಣಿಜ್ಯ ವಾಹನ ನಿರ್ವಾಹಕರ ವಿರೋಧದ ಹೊರತಾಗಿಯೂ, ರಾಜ್ಯ ಸರ್ಕಾರವು ಮೇ 1 ರಂದು ಕರ್ನಾಟಕ ಮೋಟಾರು ವಾಹನ ತೆರಿಗೆ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತರುತ್ತಿದೆ.ಕಳೆದ ವಿಧಾನ ಮಂಡಲ ಅಧಿವೇಶನದಲ್ಲಿ ಅನು ಮೋದನೆ ನೀಡಲಾಗಿದ್ದ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕಕ್ಕೆ ರಾಜ್ಯಪಾಲರು ಅನುಮೋದನೆ ನೀಡಿದ್ದು, ಅದರಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಕ್ಯಾಬ್‌ಗಳಿಗೆ ಜೀವಿತಾವಧಿ ತೆರಿಗೆಯು ವಾಹನದ ವೆಚ್ಚದ ಶೇ.5 ಆಗಿರುತ್ತದೆ. ಇಲ್ಲಿಯವರೆಗೆ, ಏಕಕಾಲದಲ್ಲಿ 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ವಾಣಿಜ್ಯ ವಾಹನಗಳಿಗೆ (ಟ್ಯಾಕ್ಸಿಗಳು) ಜೀವಿತಾವಧಿ ತೆರಿಗೆಗಳನ್ನು ವಿಧಿಸಲಾಗುತ್ತಿರಲಿಲ್ಲ, ಬದಲಿಗೆ ನಾಲ್ಕು ಆಸನಗಳ ವಾಹನಕ್ಕೆ ಪ್ರತಿ ಸೀಟಿಗೆ 100 ರೂ. ದರದಲ್ಲಿ ತ್ರೈಮಾಸಿಕವಾಗಿ ತೆರಿಗೆಗಳನ್ನು ಸಂಗ್ರಹಿಸಲಾಗುತ್ತಿತ್ತು.

- Advertisement -

Related news

error: Content is protected !!