- Advertisement -
- Advertisement -
ಬೆಂಗಳೂರು:- ದ.ಕ. ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿಯವರ ಅಧ್ಯಕ್ಷತೆಯಲ್ಲಿ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು ಹಾಗೂ ಹೊಯಿಗೆ ಗಣಿಗಾರಿಕೆಯ ರಾಜಧನ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಎಡಿಬಿ ಯೋಜನೆಯಡಿ ಪೂರ್ಣಗೊಳಿಸಿದ, ಕೈಗೆತ್ತಿಕೊಂಡಿರುವ ಕಾಮಗಾರಿಗಳ ಕುರಿತು , ಕಡಲ್ಕೊರೆತ, ಬಂದರು, ಮೀನುಗಾರಿಕ ಜೆಟ್ಟಿಗಳ ನಿರ್ಮಾಣದ ಕುರಿತು ಸಮಸ್ಯೆಗಳ ಬಗೆಗಿನ ಉನ್ನತ ಮಟ್ಟದ ಸಭೆಯಾಗಿದ್ದು,
ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಪುತ್ತೂರು ಶಾಸಕ ಸಂಜೀವ ಮಠಂದೂರು, ಬಂಟ್ವಾಳ ಶಾಸಕ ರಾಜೇಶ್ ನಾಯಕ್, ಸುಳ್ಯ ಶಾಸಕ ಅಂಗಾರ,ಹಾಗೂ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹಾಗೂ ಜಿಲ್ಲೆಯ ಪಕ್ಷದ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
- Advertisement -