Saturday, May 4, 2024
spot_imgspot_img
spot_imgspot_img

ಹೊಸ ವರ್ಷಾಚರಣೆ ವೇಳೆ ಶಾಲಾ ವಿದ್ಯಾರ್ಥಿಗಳ ಹೊಡೆದಾಟ – ಏರ್ ಗನ್, ಚಾಕು ಹಿಡಿದು ಶಾಲಾ ಮಕ್ಕಳ ಹೊಡೆದಾಟಕ್ಕೆ ಪೋಷಕರು,ಶಿಕ್ಷಕ ವರ್ಗ ತಲ್ಲಣ..!

- Advertisement -G L Acharya panikkar
- Advertisement -

ಹೊಸ ವರ್ಷಾಚರಣೆ ವೇಳೆ ಪ್ರೌಢ ಶಾಲಾ ವಿದ್ಯಾರ್ಥಿಗಳು ಶಾಲೆಯ ಹೊರಗಡೆ ಏರ್ ಗನ್, ಬಟನ್ ಚಾಕು, ಡ್ರಾಗರ್, ಬೆತ್ತ ಹಿಡಿದು ಹೊಡೆದಾಡಿಕೊಂಡಿರುವ ಭಯಾನಕ ಘಟನೆ ರಾಯಚೂರು ನಗರದಲ್ಲಿ ನಡೆದಿದೆ.

ಶಾಲಾ ಮಕ್ಕಳ ಈ ಘಟನೆ ಪೋಷಕರನ್ನು, ಶಿಕ್ಷಕ ವರ್ಗವನ್ನು ತಲ್ಲಣಗೊಳಿಸಿದೆ. ನಗರದ ಜ್ಯೋತಿ ಕಾಲೊನಿಯ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು ಕ್ಷುಲ್ಲಕ ಕಾರಣಕ್ಕೆ ಶಾಲೆಯ ಗೇಟ್ ಹೊರಗೆ ವಿದ್ಯಾರ್ಥಿಗಳು ಏರ್ ಗನ್, ಚಾಕು ಹಿಡಿದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಓರ್ವ ವಿದ್ಯಾರ್ಥಿ ಕೈಗೂ ಗಾಯವಾಗಿವೆ. ಮಕ್ಕಳ ಈ ರೀತಿಯ ಹೊಡೆದಾಟದಿಂದ ಪೋಷಕರು ಆತಂಕಗೊಂಡಿದ್ದಾರೆ.

9ನೇ ಮತ್ತು 7ನೇ ತರಗತಿ ವಿದ್ಯಾರ್ಥಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ. ಇಂದು 9ನೇ ತರಗತಿ ವಿದ್ಯಾರ್ಥಿ ಶಾಲೆಗೆ ಬಂದಿದ್ದು, ಕೆಲ ಹೊತ್ತಿನ ಬಳಿಕ ವಿದ್ಯಾರ್ಥಿ ತಿನಿಸು ತರಲು ಶಾಲೆಯಿಂದ ಹೊರಗಡೆ ಬಂದಿದ್ದಾನೆ.

ಈ ವೇಳೆ 7ನೇ ತರಗತಿಯ ವಿದ್ಯಾರ್ಥಿ ಮತ್ತು ಆತನ ಸ್ನೇಹಿತರು ಬೈಕ್​ ಮೇಲೆ ಬಂದು 9ನೇ ತರಗತಿಯ ವಿದ್ಯಾರ್ಥಿಯನ್ನ ಅಡ್ಡ ಹಾಕಿದ್ದಾರೆ. ಆಗ 9ನೇ ತರಗತಿಯ ವಿದ್ಯಾರ್ಥಿ ದಾರಿ ಬಿಡು ಎಂದಿದ್ದಾನೆ. ಅದಕ್ಕೆ 7ನೇ ತರಗತಿಯ ವಿದ್ಯಾರ್ಥಿ ಮತ್ತು ಆತನ ಸ್ನೇಹಿತರು ನಮಗೆ ದಾರಿ ಬಿಡು ಎನ್ನುತ್ತೀಯಾ ” ಏ ಸಾಲೇ ಕೋ ಮಾರೋ” ಎಂದು ಆತನಿಗೆ ಚಾಕುವಿನಿಂದ ಇರಿಯಲು ಮುಂದಾಗಿದ್ದಾರೆ.
ಆಗ 9ನೇ ತರಗತಿ ವಿದ್ಯಾರ್ಥಿ ತಪ್ಪಿಸಿಕೊಂಡಿದ್ದು, ಬೆರಳಿಗೆ ಗಾಯವಾಗಿದೆ. ಇದನ್ನು ಕಂಡ ಸ್ಥಳಿಯರು ಬಾಲಕರನ್ನು ಬೆದರಿಸಿದ್ದಾರೆ. ಆಗ ಆರೋಪಿಗಳು ಮಾರಕಾಸ್ತ್ರಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.

- Advertisement -

Related news

error: Content is protected !!