




ಬಂಟ್ವಾಳದ ಕುರಿಯಾಳ ಗ್ರಾಮದ ಧನುಷ್ ಎಂಬವರು ಮಂಗಳೂರು ನಗರ ವ್ಯಾಪ್ತಿಯಲ್ಲಿ ಕೊಲೆಗೀಡಾದ ಯುವಕನ ಜೊತೆಗೆ ನಿಂತು ತೆಗೆದ ಫೋಟೋವನ್ನು ಈ ಹಿಂದೆ ಅವರ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು, ಇದನ್ನು ಕಿಡಿಗೇಡಿಗಳು ದುರುಪಯೋಗಪಡಿಸಿಕೊಂಡ ವಿರುದ್ಧ ಪ್ರಕರಣ ದಾಖಲಾಗಿದೆ.
ಧನುಷ್ ನೀಡಿದ ದೂರಿನಂತೆ, ಧನುಷ್ ಇತ್ತೀಚೆಗೆ ಮಂಗಳೂರು ನಗರ ವ್ಯಾಪ್ತಿಯಲ್ಲಿ ಕೊಲೆಗೀಡಾದ ಯುವಕನ ಜೊತೆಗೆ ನಿಂತು ತೆಗೆದ ಫೋಟೋವನ್ನು, ಈ ಹಿಂದೆ ಅವರ instagramನಲ್ಲಿ ಪೋಸ್ಟ್ ಮಾಡಿದ್ದಾರೆ. ಈಗ ಆ ಪೋಟೋವನ್ನು ದುರುಪಯೋಗಪಡಿಸಿಕೊಂಡು “ troll Abraham” ಮತ್ತು “ maikala troll” ಹಾಗೂ ‘’ ಕರಾವಳಿ ಒಫಿಸಿಯಲ್ “ ಎಂಬ instagram ಪೇಜ್ ಗಳಲ್ಲಿ ಯಾರೋ ಕಿಡಿಗೇಡಿಗಳು ಧನುಷ್ ಮೇಲೆ ಕೋಮುದ್ವೇಷ ಭಾವನೆ ಉಂಟಾಗುವಂತಹ ಹಾಗೂ ಕೊಲೆಯ ಪ್ರಕರಣದ ಅಪರಾಧಿಯಂತೆ ಬಿಂಬಿಸಲಾಗುವ ಬರಹಗಳೊಂದಿಗೆ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ ಕ್ರ 61/2025 ಕಲಂ: 353(1) (B) , 353(2) ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ, ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದು.








