Wednesday, July 2, 2025
spot_imgspot_img
spot_imgspot_img

ಬಂಟ್ವಾಳ: ವಕೀಲರ ಬಗ್ಗೆ ಕೀಳು ಪದ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌; ನವೀನ್‌ ಗೌಡ ಖಾತೆಯ ವ್ಯಕ್ತಿಯ ವಿರುದ್ದ 3 FIR…!ದೂರು ನೀಡಿದಕ್ಕಾಗಿ ನಿಂದನಾತ್ಮಕ ಪದಗಳೊಂದಿಗೆ ಮತ್ತೆ ಅದೇ ಖಾತೆಯಲ್ಲಿ ಬೆದರಿಕೆ ಪೋಸ್ಟ್‌: ಪ್ರಕರಣ ದಾಖಲಿಸುವಂತೆ ನ್ಯಾಯಾಲಯದಿಂದ ಆದೇಶ

- Advertisement -
- Advertisement -

ಬಂಟ್ವಾಳ: ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪದಗಳನ್ನು ಉಪಯೋಗಿಸಿ ಪೋಸ್ಟ್ ಹಾಕಿದ ಆರೋಪದಲ್ಲಿ ನವೀನ್ ಗೌಡ ಎಂಬಾತನ ವಿರುದ್ಧ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪುರಂದರ ಗೌಡ ಎಂಬವರು ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ.

ನವೀನ್ ಗೌಡ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ವಕೀಲರನ್ನು ಕೀಳು ಮಟ್ಟದ ಪದ ಬಳಸಿ ಪೋಸ್ಟ್ ಹಾಕಿದ ವಿಚಾರದಲ್ಲಿ ಶಿವಾನಂದ ಎಂಬವರು ಬಂಟ್ವಾಳ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಈ ಬಗ್ಗೆ ದೂರು ತನಿಖೆಯ ಹಂತದಲ್ಲಿರುವಾಗಲೇ ನವೀನ್‌ ಗೌಡ ಎಂಬ ಖಾತೆಯನ್ನೊಳಗೊಂಡ ವ್ಯಕ್ತಿಯು ಶಿವಾನಂದ ಎಂಬವರನ್ನು ಉದ್ದೇಶಿಸಿ ಮತ್ತೆ ಅದೇ ಖಾತೆಯಲ್ಲಿ ನಿಂದನಾತ್ಮಕ ಪದಗಳನ್ನು ಬಳಸಿ ಬೆದರಿಕೆಯೊಡ್ಡಿ ಪೋಸ್ಟ್‌ ಹಾಕಿರುತ್ತಾನೆ.

ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್‌ ಠಾಣೆಗೆ ಶಿವಾನಂದರವರು ದೂರು ನೀಡಿರುತ್ತಾರೆ. ಶಿವಾನಂದರವರು ನೀಡಿದ ಎರಡು ದೂರಿನ ಬಗ್ಗೆ ಪ್ರಕರಣ ದಾಖಲಿಸುವಂತೆ ಮಾನ್ಯ ನ್ಯಾಯಾಲಯ ಆದೇಶಿಸಿದೆ.ನವೀನ್‌ ಗೌಡ ಎಂಬ ಖಾತೆಯನ್ನೊಳಗೊಂಡ ವ್ಯಕ್ತಿಯು ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಕೀಲ ಸಮುದಾಯದ ಬಗ್ಗೆ ಅಶ್ಲೀಲ ಪದಗಳನ್ನು ಉಪಯೋಗಿಸಿ ಪೋಸ್ಟ್ ಹಾಕಿದ ಬಗ್ಗೆ ಶಿವಾನಂದರು ಜೂನ್‌ 24 ರಂದು ಬಂಟ್ವಾಳ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಈ ಬಗ್ಗೆ ದೂರು ತನಿಖೆಯ ಹಂತದಲ್ಲಿರುವಾಗಲೇ ನವೀನ್‌ ಗೌಡ ಎಂಬ ಖಾತೆಯನ್ನೊಳಗೊಂಡ ವ್ಯಕ್ತಿಯು ಈ ಬಗ್ಗೆ ಮಾಧ್ಯಮವೊಂದರಲ್ಲಿ ಪ್ರಕಟವಾದ ವರದಿಯ ಪ್ರತಿಯೊಂದಿಗೆ ಜೂನ್ 26 ರಂದು ನವೀನ್‌ ಗೌಡ ಹೆಸರಿನ ತನ್ನ ಫೇಸ್‌ಬುಕ್ ಖಾತೆಯಲ್ಲಿ “ಯಾವನೋ ಅವನು ಬೇವರ್ಸಿ ಶಿವಾನಂದ ನನ್ನ ಬಗ್ಗೆ ಕಂಪ್ಲೇಂಟ್ ಕೊಟ್ಟದ್ದು? ಇನ್ನು ನನಗೆ ನೀನೆ ಟಾರ್ಗೆಟ್ ಬೋಳಿಮಗನೆ… ಈ ಬ್ಯಾವರ್ಸಿಯ ಅಡ್ರೆಸ್ ಇದ್ದರೆ ಯಾರಾದರೂ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ” ಎಂದು ಶಿವಾನಂದರನ್ನು ಉದ್ದೇಶಿಸಿ ಬೆದರಿಕೆಯೊಡ್ಡಿ ನಿಂದನಾತ್ಮಕ ಪದಗಳನ್ನು ಬಳಿಸಿ ಮಾನಹಾನಿ ಪೋಸ್ಟ್‌ನ್ನು ಹಾಕಿರುತ್ತಾನೆ. ಕಾನೂನಿನ ಭಯವಿಲ್ಲದೆ ಸರ್ವಾಧಿಕಾರದ ಧೋರಣೆಯಿಂದ ಕ್ರಿಮಿನಲ್ ಮತ್ತು ಗೂಂಡಾ ಸ್ವರೂಪದ ಹಿನ್ನಲೆಯುಲ್ಲಿ ಒಬ್ಬ ವ್ಯಕ್ತಿಯು ಸಾಮಾಜಿಕ ಜಾಲತಾಣವನ್ನು ದುರುಪಯೋಗ ಪಡಿಸಿಕೊಂಡು, ನವೀನ್ ಗೌಡ ಎಂಬ ಹೆಸರಿನಿಂದ ಗುರುತಿಸಿಕೊಂಡ ವ್ಯಕ್ತಿಯು ಸಾರ್ವಜನಿಕ ಶಾಂತಿಗೆ ಭಂಗ ತರುವಂತಹ ಬರವಣಿಗೆಯನ್ನು ಬರೆದು ಬಿತ್ತರಿಸಿ ಬೆದರಿಕೆಯೊಡ್ಡಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಶಿವಾನಂದರವರು ಬಂಟ್ವಾಳ ನರಗ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಶಿವಾನಂದರವರು ನೀಡಿದ ಎರಡೂ ದೂರಿನ ಬಗ್ಗೆ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶ ಹೊರಡಿಸಿದೆ.

- Advertisement -

Related news

error: Content is protected !!