Sunday, September 13, 2026
spot_imgspot_img
spot_imgspot_img

ಹುಬ್ಬಳ್ಳಿ ಸಿಲಿಂಡರ್ ಸ್ಪೋಟ ಕೇಸ್: ಮೃತ 8 ಅಯ್ಯಪ್ಪ ಮಾಲಾಧಾರಿಗಳಿಗೆ ಪರಿಹಾರ ಘೋಷಣೆ

- Advertisement -
- Advertisement -

ಹುಬ್ಬಳ್ಳಿ:- ಹುಬ್ಬಳ್ಳಿ ಸಿಲಿಂಡರ್ ಸ್ಪೋಟ ಕೇಸ್ ಗೆ ಸಂಬಧಪಟ್ಟಂತೆ ಮೃತ 8 ಅಯ್ಯಪ್ಪ ಮಾಲಾಧಾರಿಗಳಿಗೆ ಪರಿಹಾರ ಘೋಷಣೆ ಮಾಡಲಾಗಿದೆ.ಪರಿಹಾರಕ್ಕಾಗಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್​ ಬರೆದಿದ್ದ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಂದಿಸಿದ್ದು, ಕುಟುಂಬಗಳಿಗೆ 5 ಲಕ್ಷ ರೂ.ಪರಿಹಾರ ಘೋಷಿಸಿದೆ.ಅಗ್ನಿ ದುರಂತದ 9 ಮಾಲಾಧಾರಿಗಳು ಗಾಯಗೊಂಡಿದ್ದರು.

ಚಿಕಿತ್ಸೆ ಫಲಿಸದೆ ಒಬ್ಬರ ಬೆನ್ನಿಗೊಬ್ಬರಂತೆ ಮೃತಪಟ್ಟಿದ್ದಾರೆ. ಇತ್ತೀಚೆಗೆ ಉಣಕಲ್​​​​ನ ಪ್ರಕಾಶ್​ ಬಾರಕೇರ ಕೂಡ ಚಿಕಿತ್ಸೆ ಫಲಿಸದೆ ಪ್ರಾಣಬಿಟ್ಟಿದ್ದಾನೆ. ಈ ಮೂಲಕ ಸಾವಿನ ಸಂಖ್ಯೆ 8ಕ್ಕೆ ಏರಿಕೆ ಆಗಿದೆ. 9 ಜನರ ಪೈಕಿ ನಿಜಲಿಂಗಪ್ಪ ಬೇಪುರಿ, ಸಂಜಯ್ ಸವದತ್ತಿ, ಮಂಜು ವಾಗ್ಮೋಡೆ, ಲಿಂಗರಾಜ ಬೀರನೂರ, ತೇಜಸ್ವರ್ ಸುತಾರೆ, ರಾಜು ಮೂಗೇರಿ, ಶಂಕರ್ ಊರ್ಬಿ, ಪ್ರಕಾಶ್ ಬಾರಕೇರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.ಮೃತ ಮಾಲಾಧಾರಿಗಳಿಗೆಲ್ಲ ಶೇ.70-80ರಷ್ಟು ಸುಟ್ಟು ಗಾಯವಾಗಿತ್ತು. ಅಂತಾರಾಷ್ಟ್ರೀಯ ತಜ್ಞ ವೈದ್ಯರೂ ಸಲಹೆ ಪಡೆದಿದ್ದೆವು ಆದ್ರೂ ಉಳಿಸಿಕೊಳ್ಳಲು ಆಗಲಿಲ್ಲ. 8 ಜನರ ಸಾವು ನಮಗೆ ನೋವು ತಂದಿದೆ ಅಂತ ಕಿಮ್ಸ್ ನಿರ್ದೇಶಕ ಡಾ. ಎಸ್​ಎಫ್ ಕಮ್ಮಾರ ಬೇಸರ ವ್ಯಕ್ತಪಡಿಸಿದ್ದರು.

- Advertisement -

Related news

error: Content is protected !!