Tuesday, September 1, 2026
spot_imgspot_img
spot_imgspot_img

ಒಲೆಟಿ ದೇಶದ ಮೊಟ್ಟ ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್ ಆಗಿ ಕನ್ನಡತಿ ಆಶ್ರಿತಾ

- Advertisement -
- Advertisement -

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಆಶ್ರಿತಾ ವಿ. ಒಲೆಟಿ ದೇಶದ ಮೊದಲ ಮಹಿಳಾ ಫ್ಲೈಟ್ ಟೆಸ್ಟ್​ ಎಂಜಿನಿಯರ್ ಆಗಿ ಆಯ್ಕೆಯಾಗಿದ್ದಾರೆ.

ಏರೋ ಸ್ಪೇಸ್ ಇಂಜಿನಿಯರ್ ಆಗಿರುವ ಆಶ್ರಿತಾ 2014ರಲ್ಲಿ ವಾಯುಪಡೆಯ ಟೆಕ್ನಕಲ್ ವಿಭಾಗಕ್ಕೆ ಆಯ್ಕೆಯಾಗಿದ್ದರು. ಕೊಳ್ಳೇಗಾಲದ ವೆಂಕಟೇಶ್ವರ ಜ್ಯುವೆಲರ್ಸ್ ಮಾಲೀಕರಾದ ಒ.ವಿ ವೆಂಕಟೇಶ್ ಬಾಬು ಹಾಗೂ ಒ.ವಿ ವಾಣಿ ದಂಪತಿಯ ಪುತ್ರಿಯಾಗಿರುವ ಆಶ್ರಿತಾ ಅವರು ಬೆಂಗಳೂರಿನ ಏರ್ ಪೋಸ್ಟ್ ಟೆಸ್ಟ್ ಪೈಲೆಟ್ಸ್ ಸ್ಕೂಲ್​​ನಲ್ಲಿ ಪದವಿ ಪಡೆದುಕೊಂಡಿದ್ದಾರೆ.

ಫ್ಲೈಟ್ ಟೆಸ್ಟ್ ಕೋರ್ಸ್ ಪೂರೈಸಿದ ಮೊದಲ ಮಹಿಳೆ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ ಆಶ್ರಿತಾ. ಏರ್​ ಶೋ ನೋಡಲು ಹೋದಾಗ ಚಿಗುರಿದ ಕನಸನ್ನ ಆಶ್ರಿತಾ ಇಂದು ನನಸು ಮಾಡಿಕೊಂಡಿದ್ದು, ರಾಜ್ಯಕ್ಕೆ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾರೆ.

- Advertisement -

Related news

error: Content is protected !!