- Advertisement -
- Advertisement -
ಬೆಂಗಳೂರು: ಈಗಾಗಲೇ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶದ ದಿನಾಂಕ ಘೋಷಣೆಯಾಗಿದೆ. ಆ.10ಕ್ಕೆ ರಿಸಲ್ಟ್ ಅನೌನ್ಸ್ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ. ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಮೊಬೈಲ್ ಗೆ ನೇರವಾಗಿ ಫಲಿತಾಂಶ ತಲುಪಲಿದೆ ಎಂದು ತಿಳಿಸಿದ್ದಾರೆ.

ಸೋಮವಾರ ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ. ಉತ್ತೀರ್ಣಗೊಂಡ ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ಉಚಿತವಾಗಿದೆ ರಿಸಲ್ಟ್ ಬರಲಿದೆ. ಇದಕ್ಕೆ ಪ್ರತ್ಯೇಕ ನೋಂದಾವಣಿ ಅಗತ್ಯವಿಲ್ಲ. ನಂತರ ವೆಬ್ ಸೈಟ್ ನಲ್ಲೂ ರಿಸಲ್ಟ್ ಲಭ್ಯವಿದೆ ಎಂದು ತಿಳಿಸಿದರು.

- Advertisement -