Saturday, June 28, 2025
spot_imgspot_img
spot_imgspot_img

ಕಾಸರಗೋಡು : ಐದು ಅಡಿ ಎತ್ತರದ ಗೇಟ್ ಬಿದ್ದು ಬಾಲಕ ಮೃತ್ಯು….!!

- Advertisement -
- Advertisement -

ಕಾಸರಗೋಡು : ಐದು ಅಡಿ ಎತ್ತರದ ಸ್ಲೈಡಿಂಗ್ ಗೇಟ್ ಬಿದ್ದು ಎರಡು ವರ್ಷದ ಬಾಲಕ ಮೃತಪಟ್ಟ ಘಟನೆ ಕಾಸರಗೋಡಿನ ಉದ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇಂದು ನಡೆದಿದೆ.

ಮೃತ ಬಾಲಕನನ್ನು ಉದ್ಮಾ ಪಂಚಾಯತ್‌ನ ಪಲ್ಲಂ ತೆಕ್ಕೆಕ್ಕರ ನಿವಾಸಿ ರೈಮಾ ಮತ್ತು ಮಾಹಿನ್ ರಫಿ ದಂಪತಿಯ ಪುತ್ರ ಅಬು ತಾಹಿರ್ ಎಂದು ಗುರುತಿಸಲಾಗಿದೆ.
ರಫಿ ಅವರು ಶುಕ್ರವಾರ ದುಬೈನಲ್ಲಿರುವ ತಮ್ಮ ಕೆಲಸದ ಸ್ಥಳಕ್ಕೆ ಹಿಂತಿರುಗುವ ಸಿದ್ದತೆಯಲ್ಲಿದ್ದರು, ಈ ಹಿನ್ನಲೆ ಮಾಂಙಾಡ್ ನ ಸಂಬಂಧಿಕರ ಮನೆಗೆ ಆಗಮಿಸಿದ್ದರು. ಈ ವೇಳೆ ಅವರ ಮನೆಯ ಗೇಟ್ ನಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಕಬ್ಬಿಣದ ಗೇಟ್ ಬಿದ್ದಿದ್ದು, ಅದರಡಿ ಸಿಲುಕಿದ್ದ ಬಾಲಕನನ್ನು ಕೂಡಲೇ ಕಾಸರಗೋಡಿನ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ.ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!