Sunday, May 5, 2024
spot_imgspot_img
spot_imgspot_img

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಧ್ವಜಾರೋಹಣ, ವರ್ಷಾವಧಿ ಜಾತ್ರಾ ಮಹೋತ್ಸವ ಪ್ರಾರಂಭ

- Advertisement -G L Acharya panikkar
- Advertisement -

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ವರ್ಷಾವಧಿ ಜಾತ್ರಾ ಮಹೋತ್ಸವವು ಇಂದಿನಿಂದ ಜ. 21 ರ ವರೆಗೆ ನಡೆಯಲಿದ್ದು, ಇಂದು ಧ್ವಜಾರೋಹಣದ ಮೂಲಕ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಯಿತು.

ರಾತ್ರಿ 8:30 ಕ್ಕೆ ಶ್ರೀ ದೇವರಿಗೆ ಲಕ್ಷದೇಪೋತ್ಸವ ,ಉತ್ಸವ ಬಲಿ, ಕಟ್ಟೆ ಪೂಜೆಯ ಬಳಿಕ ಬಟ್ಟಲು ಕಾಣಿಕೆ ನಡೆಯಲಿದೆ. ಸಂಜೆ 6:00 ಕ್ಕೆ ಅರಸು ಮುಂಡಾಲತ್ತಾಯ ದೈವದ ಭಂಡಾರ ಕ್ಷೇತ್ರಕ್ಕೆ ಆಗಮನವಾಗಲಿದೆ.

ಸಂಜೆ ಗಂಟೆ 6:30ರಿಂದ ಅರವಿಂದ ಆಚಾರ್ಯ ಮಾಣಿಲ ಮತ್ತು ಬಳಗ “ಭಜನ್ ಸಂಧ್ಯಾ” ಕಾರ್ಯಕ್ರಮ ನಡೆಯಲಿದೆ.

ನಂತರ ರಾತ್ರಿ ಗಂಟೆ 7:30ರಿಂದ ಬಿಲ್ಲವ ಸಂಘ (ರಿ.) ವಿಟ್ಲ ಮತ್ತು ಬಿಲ್ಲವ ಮಹಿಳಾ ಘಟಕ , ಯುವ ವಾಹಿನಿ, ವಿಟ್ಲ ಘಟಕ ಶಿವಗಿರಿ – ಪೊನ್ನೊಟ್ಟು, ಇದರ ಪಾಯೋಜಕತ್ವದಲ್ಲಿ ಚಾಪರ್‍ಕ್ ಕಲಾವಿದರಿಂದ ಈ ವರ್ಷದ ವಿಭಿನ್ನ ಶೈಲಿಯ ನಾಟಕ, ರಾಜ್ಯ ಪ್ರಶಸ್ತಿ ಪುರಸ್ಕೃತ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ಇವರು ರಚಿಸಿ ನಟಿಸಿ ನಿರ್ದೇಶಿಸಿರುವ “ಪುದರ್ ದೀದಾಂಡ್ ತುಳು ನಾಟಕ ನಡೆಯಲಿದೆ.

- Advertisement -

Related news

error: Content is protected !!