Friday, April 26, 2024
spot_imgspot_img
spot_imgspot_img

ಆಹಾರ ಹಾಗೂ ಕೃಷಿ ಸಂಸ್ಥೆ ಸ್ಮರಣಾರ್ಥ ಪ್ರಧಾನಿ ಮೋದಿ 75 ರೂ ಮೌಲ್ಯದ ನಾಣ್ಯ ಬಿಡುಗಡೆ

- Advertisement -G L Acharya panikkar
- Advertisement -

ನವದೆಹಲಿ: ಆಹಾರ ಹಾಗೂ ಕೃಷಿ ಸಂಸ್ಥೆಯ 75ನೇ ವರ್ಷದ ವಾರ್ಷಿಕೋತ್ಸವದ ಸ್ಮರಣಾರ್ಥ ಪ್ರಧಾನಿ ಮೋದಿ ಅಕ್ಟೋಬರ್​ 16 ರಂದು 75 ರೂಪಾಯಿ ಮೌಲ್ಯದ ನಾಣ್ಯವನ್ನ ಬಿಡುಗಡೆ ಮಾಡಲಿದ್ದಾರೆ.

ಈ ಮೂಲಕ ಭಾರತ ಹಾಗೂ ಎಫ್​ಎಓ ನಡುವಿನ ಸಂಬಂಧವನ್ನ ಮತ್ತಷ್ಟು ಬಲಗೊಳಿಸಲು ಮುಂದಾಗಿದ್ದಾರೆ. ಇನ್ನು ಇದರ ಜೊತೆಯಲ್ಲಿ 8 ಬಗೆಯ ಬೆಳೆಗಳನ್ನೂ ರಾಷ್ಟ್ರಕ್ಕೆ ಅರ್ಪಿಸುವ ಮೂಲಕ ಕೃಷಿ ಕ್ಷೇತ್ರಕ್ಕೆ ಪ್ರಧಾನಿ ಮೋದಿ ನೀಡಿರುವ ಆದ್ಯತೆಯನ್ನ ಜಗತ್ತಿಗೇ ಸಾರಲಿದ್ದಾರೆ ಅಂತಾ ಪ್ರಧಾನಿ ಕಚೇರಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

ಈ ಒಂದು ಮಹತ್ವಪೂರ್ಣ ಕಾರ್ಯಕ್ಕೆ ದೇಶದ ಅಂಗನವಾಡಿಗಳು, ಕೃಷಿ ವಿಜ್ಞಾನ ಕೇಂದ್ರಗಳು, ಸಾವಯವ ಹಾಗೂ ತೋಟಗಾರಿಕಾ ಇಲಾಖೆಗಳು ಸಾಕ್ಷಿಯಾಗಲಿವೆ. ಇನ್ನುಳಿದಂತೆ ಕೇಂದ್ರದ ಕೃಷಿ ಸಚಿವರು, ಹಣಕಾಸು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.

- Advertisement -

Related news

error: Content is protected !!