- Advertisement -
- Advertisement -
ಫುಟ್ಭಾಲ್ನ ದಂತಕಥೆ ಡಿಯಾಗೋ ಮೆರಡೋನಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪುಟ್ಬಾಲ್ನ ಸಾರ್ವಕಾಲಿಕ ಶ್ರೇಷ್ಟ ಆಟಗಾರ ಎಂದು ಗುರುತಿಸಿಕೊಂಡಿದ್ದ ಮರಡೋನಾ ಇಂದಿಗೂ ಅನೇಕರಿಗೆ ಸ್ಫೂರ್ತಿ. 1986ರಲ್ಲಿ ಅರ್ಜೆಂಟಿನಾಗೆ ವಿಶ್ವಕಪ್ ಗೆದ್ದುಕೊಡುವಲ್ಲಿ ಪ್ರಮುಖ ವಹಿಸಿದ ಈ ಆಟಗಾರ ನಿನ್ನೆ ಕೊನೆ ಉಸಿರೆಳೆದಿರುವುದಾಗಿ ಕುಟುಂಬದ ಮೂಲ ದೃಢಪಡಿಸಿದೆ.

ಇತ್ತೀಚೆಗೆ ಇವರು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಪರಿಣಾಮ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಪುಟ್ಬಾಲ್ ಹೊರತಾಗಿ ಮಾದಕ ಚಟದಿಂದಾಗಿ ಕೂಡ ಇವರ ವೃತ್ತಿ ಜೀವನ ವಿವಾದಕ್ಕೆ ಗುರಿಯಾಗಿತ್ತು.

‘ ‘ಹ್ಯಾಂಡ್ ಆಫ್ ಗಾಡ್‘ ಎಂದೇ ಖ್ಯಾತಿ ಗಳಿಸಿದ ಈತ, ಪುಟ್ಬಾಲ್ ವಿಶ್ವಕಪ್ನಲ್ಲಿ ಇಂಗ್ಲೆಡ್ ವಿರುದ್ಧ ಗಳಿಸಿದ ಗೋಲ್ ಇಂದಿಗೂ ದಾಖಲೆ ಪುಟ ಸೇರಿದೆ.


- Advertisement -