Sunday, May 19, 2024
spot_imgspot_img
spot_imgspot_img

ಹುಡುಗಿಯರು 15 ವರ್ಷಕ್ಕೆ ಮಕ್ಕಳನ್ನು ಪಡೆಯುವ ಸಾಮರ್ಥ್ಯ ಹೊಂದಿರುವಾಗ ಮದುವೆ ವಯಸ್ಸಿನ ಏರಿಕೆ ಏಕೆ?- ಕಾಂಗ್ರೆಸ್​ ನಾಯಕನ ವಿವಾದಾತ್ಮಕ ಹೇಳಿಕೆ!

- Advertisement -G L Acharya panikkar
- Advertisement -

ಮಧ್ಯಪ್ರದೇಶ: ಮಾಜಿ ಕಂದಾಯ ಸಚಿವ ಮತ್ತು ಹಿರಿಯ ಕಾಂಗ್ರೆಸ್ ಶಾಸಕ ಸಜ್ಜನ್ ಸಿಂಗ್ ವರ್ಮಾ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು, ರಾಜ್ಯ ರಾಜಕೀಯದಲ್ಲಿ ಆಕ್ರೋಶ ಭುಗಿಲೆದ್ದಿದೆ. “ಹೆಣ್ಣುಮಕ್ಕಳು 15 ವರ್ಷದಲ್ಲಿ ಮಕ್ಕಳನ್ನು ಪಡೆಯುವ ಸಾಮರ್ಥ್ಯ ಹೊಂದಿರುವಾಗ, ಅವರ ಮದುವೆಯ ವಯಸ್ಸನ್ನು 18-21 ವರ್ಷಕ್ಕೆ ಹೆಚ್ಚಿಸುವ ಬಗ್ಗೆ ಯಾಕೆ ಯೋಚಿಸಬೇಕು” ಎಂದು ಶಾಸಕ ಹೇಳಿದ್ದಾರೆ.

ಹೆಣ್ಣು ಮಕ್ಕಳ ಕನಿಷ್ಠ ಮದುವೆಯ ವಯಸ್ಸನ್ನು 18 ವರ್ಷದಿಂದ 21 ವರ್ಷಕ್ಕೆ ಹೆಚ್ಚಿಸುವ ಕುರಿತು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಸಬೇಕೆಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇತ್ತೀಚಿಗೆ ಕರೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ರಾಜ್ಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರ ನಿಷ್ಠಾವಂತ ಬೆಂಬಲಿಗರಲ್ಲಿ ಒಬ್ಬರಾದ ಸಜ್ಜನ್ ಸಿಂಗ್ ವರ್ಮಾ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

“ಯಾವುದೇ ಹೆಣ್ಣು 15 ನೇ ವಯಸ್ಸಿನಲ್ಲಿ ಸಂತಾನೋತ್ಪತ್ತಿ ಮಾಡುವ ಸಾಮರ್ಥ್ಯ ಹೊಂದಿರುತ್ತಾಳೆ. ಇದು ನನ್ನ ಶೋಧನೆಯಲ್ಲ, ವೈದ್ಯರ ವರದಿಯ ಪ್ರಕಾರ 15 ವರ್ಷ ವಯಸ್ಸಿನಲ್ಲಿ ಹೆಣ್ಣು ಮಕ್ಕಳು ಸಂತಾನೋತ್ಪತ್ತಿ ಹೊಂದುವುದು ಸೂಕ್ತವಾಗಿದೆ. ಆದರೂ ಹೆಣ್ಣು ಮಕ್ಕಳಿಗೆ ಕನಿಷ್ಠ 18 ವರ್ಷ ವಯಸ್ಸಾದಾಗ ಮಾತ್ರ ಮದುವೆಯಾಗುವಷ್ಟು ಪ್ರಬುದ್ಧರೆಂದು ಪರಿಗಣಿಸಲಾಗುತ್ತದೆ” ಎಂದು ಸಜ್ಜನ್ ಸಿಂಗ್ ಹೇಳಿದ್ದಾರೆ.

- Advertisement -

Related news

error: Content is protected !!