Sunday, June 29, 2025
spot_imgspot_img
spot_imgspot_img

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ 14 ವರ್ಷ, ಪತ್ನಿಗೆ 7 ವರ್ಷ ಜೈಲು ಶಿಕ್ಷೆ ಪ್ರಕಟ

- Advertisement -
- Advertisement -

ಇಸ್ಲಾಮಾಬಾದ್: ಅಲ್-ಖಾದಿರ್ ಟ್ರಸ್ಟ್ಗೆ ಸಂಬಂಧಿಸಿದ ಭೂ ಭ್ರಷ್ಟಾಚಾರ ಪ್ರಕರಣದ ಆರೋಪಿಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ 14 ವರ್ಷ ಜೈಲು ಮತ್ತು ಅವರ ಪತ್ನಿ ಬುಶ್ರಾ ಬೀಬಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಇಮ್ರಾನ್ ಖಾನ್ ಮೇಲಿದ್ದ ಆರೋಪ ಸಾಬೀತಾದ ಬೆನ್ನಲ್ಲೇ ಇಂದು ರಾವಲ್ಪಿಂಡಿಯಲ್ಲಿರುವ ಭ್ರಷ್ಟಾಚಾರ ವಿರೋಧಿ ನ್ಯಾಯಾಲಯವು ಅವರಿಗೆ ಹಾಗೂ ಅವರ ಪತ್ನಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ನ್ಯಾಯಾಧೀಶರು ಅಡಿಲಾ ಜೈಲಿನಲ್ಲಿ ಸ್ಥಾಪಿಸಲಾದ ತಾತ್ಕಾಲಿಕ ನ್ಯಾಯಾಲಯದಲ್ಲಿ ಶಿಕ್ಷೆಯ ತೀರ್ಪು ಪ್ರಕಟಿಸಲಾಗಿದೆ. ಇಮ್ರಾನ್ ಖಾನ್‌ನನ್ನು ಅಲ್-ಖಾದಿರ್ ಟ್ರಸ್ಟ್‌ಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಲಾಗಿದೆ. ಸದ್ಯ ಇಮ್ರಾನ್ ಖಾನ್ ಆಗಸ್ಟ್ 2023 ರಿಂದ ಜೈಲುವಾಸ ಅನುಭವಿಸುತ್ತಿದ್ದಾರೆ.

ಇಮ್ರಾನ್ ಖಾನ್ ತಮ್ಮ ಅಧಿಕಾರಾವಧಿಯಲ್ಲಿ ಪಂಜಾಬ್‌ನ ಝೀಲಂನಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದಾಗಿ ಅವರು ಭರವಸೆ ನೀಡಿದ್ದರು. ಈ ಭರವಸೆಯ ಭಾಗವಾಗಿ ಖಾನ್ ಅಲ್-ಖಾದಿರ್ ಯೂನಿವರ್ಸಿಟಿ ಪ್ರಾಜೆಕ್ಟ್ ಟ್ರಸ್ಟ್ ಸ್ಥಾಪನೆ ಮಾಡಿದ್ದರು.

ಈ ಟ್ರಸ್ಟ್ ನಲ್ಲಿ ಅದರಲ್ಲಿ ಬೀಬಿ, ಆಪ್ತ ಸಹಾಯಕರಾಗಿದ್ದ ಬುಖಾರಿ ಮತ್ತು ಬಾಬರ್ ಅವರನ್ನು ಪದಾಧಿಕಾರಿಗಳಾಗಿ ನೇಮಕ ಮಾಡಲಾಗಿತ್ತು. ಈ ಸಂಬಂಧ ಆಗಿನ ಪಿಟಿಐ ಸರ್ಕಾರ ಮತ್ತು ಆಸ್ತಿ ಉದ್ಯಮಿ ನಡುವೆ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದಿಂದ ದೇಶದ ಖಜಾನೆಗೆ 190 ಮಿಲಿಯನ್ ಪೌಂಡ್‌ಗಳ ನಷ್ಟವಾಗಿದೆ. ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು 458 ಎಕರೆಗೂ ಹೆಚ್ಚು ಭೂಮಿ ಪಡೆದು ಲಾಭವನ್ನು ಪಡೆದ ಆರೋಪ ಇಮ್ರಾನ್ ಖಾನ್ ಅವರ ಮೇಲಿದೆ ಎನ್ನಲಾಗಿದೆ.

- Advertisement -

Related news

error: Content is protected !!