Saturday, June 28, 2025
spot_imgspot_img
spot_imgspot_img

ಬೆಳ್ತಂಗಡಿ : ಸಾಮಾಜಿಕ ಜಾಲತಾಣದ ಮೂಲಕ ಲಕ್ಷಾಂತರ ರೂಪಾಯಿ ವರ್ಗಾಯಿಸಿ ವಂಚನೆ

- Advertisement -
- Advertisement -

ಬೆಳ್ತಂಗಡಿ : ಅಪರಿಚಿತ ವ್ಯಕ್ತಿಗಳು ಸಾಮಾಜಿಕ ಜಾಲತಾಣದ ಮೂಲಕ ಲಕ್ಷಾಂತರ ರೂಪಾಯಿ ವರ್ಗಾಯಿಸಿ ವಂಚನೆ ಮಾಡಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಪ್ರಕರಣದ ಫಿರ್ಯಾದಿದಾರರಾದ ಬೆಳ್ತಂಗಡಿ ನಿವಾಸಿಯೊಬ್ಬರಿಗೆ Instagram ಖಾತೆಗೆ, ದಿನಾಂಕ: 23-05-2024ರಂದು, Share Market ನಲ್ಲಿ ಹಣ ಹಾಕುವ ಬಗ್ಗೆ ಒಂದು ಲಿಂಕ್ ಬಂದಿರುತ್ತದೆ. ಅದರಲ್ಲಿ ಸೂಚಿಸಿದಂತೆ ಮುಂದುವರಿದಾಗ, ಫಿರ್ಯಾದಿದಾರರ ಮೊಬೈಲ್ ಸಂಖ್ಯೆಗೆ, 551-JOHCM Training Camp ಹಾಗೂ Accet Student Group-R57 ಎಂಬ ವಾಟ್ಸಪ್ ಗ್ರೂಪ್ ಗಳಿಗೆ ಸೇರಲ್ಪಡುತ್ತದೆ. ಸದ್ರಿ ವಾಟ್ಸಪ್ ಗ್ರೂಪ್ ನಲ್ಲಿ ಅಪರಿಚಿತ ವ್ಯಕ್ತಿಗಳು Share Market ಬಗ್ಗೆ ಮಾಹಿತಿಯನ್ನು ನೀಡಿರುತ್ತಾರೆ. ಬಳಿಕ ಅವರುಗಳು ಕಳುಹಿಸಿದ ಲಿಂಕ್ ಮುಖಾಂತರ, ಅವರು ತಿಳಿಸಿದ AC MAX ಹಾಗೂ JOHCM ಎಂಬ APP ನ್ನು ಡೌನ್ಲೋಡ್ ಮಾಡಿರುತ್ತಾರೆ. ಸದ್ರಿ ಎರಡು APP ಗಳಲ್ಲಿ ಫಿರ್ಯಾದಿದಾರರ ಬ್ಯಾಂಕ್ ಖಾತೆಯಿಂದ ಅಪರಿಚಿತ ವ್ಯಕ್ತಿಗಳು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತಹಂತವಾಗಿ ರೂ.3,30,000/- ಹಣ ವರ್ಗಾಯಿಸಿರುತ್ತಾರೆ. ಸದ್ರಿ ವರ್ಗಾಯಿಸಿರುವ ಹಣವನ್ನು ಹಿಂತಿರುಗಿಸದೇ ಮೋಸ ಮಾಡಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಸಿ ಇ ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅ.ಕ್ರ: 22/2024 ಕಲಂ: 66 (C) 66 (D) IT Act ಪ್ರಕರಣ ದಾಖಲಾಗಿರುತ್ತದೆ.

- Advertisement -

Related news

error: Content is protected !!