Sunday, June 7, 2026
spot_imgspot_img
spot_imgspot_img

ಬಿಪಿಎಲ್ ಕುಟಂಬಕ್ಕೆ ಉಚಿತ ಇಂಟರ್ ನೆಟ್ ಘೋಷಿಸಿದ ಕೇರಳ ಸರ್ಕಾರ

- Advertisement -
- Advertisement -

ತಿರುವನಂತಪುರಂ: ಚುನಾವಣೆಯ ಹೊಸ್ತಿಲಲ್ಲಿ ಇರುವ ಕೇರಳ ಸರ್ಕಾರ, ಬಿಪಿಎಲ್ ಕುಟಂಬಕ್ಕೆ ಕೊಡುಗೆ ಘೋಷಿಸಿದೆ. ಉಚಿತ ಇಂಟರ್ ನೆಟ್ ನೀಡುವುದಾಗಿ ಹೇಳಿದೆ.

ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದ ಹಣಕಾಸು ಸಚಿವ ಥೋಮಸ್ ಐಸಾಕ್ ಈ ಘೋಷಣೆ ಮಾಡಿದ್ದಾರೆ. ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿ ಮಾತನಾಡಿದ ಥೋಮಸ್ ಐಸಾಕ್, ಕೊರೋನಾದಿಂದ ರಾಜ್ಯದ ಆದಾಯ ಸಂಗ್ರಹ ಕುಸಿದಿದೆ ಎಂದು ತಿಳಿಸಿದರು.

ಆದರೂ ಸೀಮಿತ ಸಂಪನ್ಮೂಲದಲ್ಲಿ ಕೂಡ ಬಡವರ ಹಿತಾಸಕ್ತಿ ರಕ್ಷಿಸಲು ಸರ್ಕಾರ ಎಲ್ಲ ಕ್ರಮ ತೆಗೆದುಕೊಂಡಿದೆ ಎಂದು ಅವರು ತಿಳಿಸಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಕೇರಳ ವಿಧಾನಸಭೆಗೆ ಚುನಾವಣೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ.

- Advertisement -

Related news

error: Content is protected !!