Thursday, June 18, 2026
spot_imgspot_img
spot_imgspot_img

ಮನನೊಂದ ತಂದೆಯಿಂದ ಘೋರ ಕೃತ್ಯ; ನಾಲ್ಕು ಮಕ್ಕಳಿಗೆ ವಿಷನೀಡಿ ಆತ್ಮಹತ್ಯೆಗೆ ಶರಣು

- Advertisement -
- Advertisement -

ಬೆಳಗಾವಿ: ಕೊರೋನಾ ನಂತರ ಬ್ಲ್ಯಾಕ್ ಫಂಗಸ್ ನಿಂದಾಗಿ ಪತ್ನಿ ಸಾವನ್ನಪ್ಪಿದ್ದು, ಮನನೊಂದ ಪತಿ, ತನ್ನ ನಾಲ್ವರು ಮಕ್ಕಳಿಗೆ ವಿಷ ನೀಡಿ, ತಾನು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಚಿಕ್ಕೋಡಿಯ ಬೋರಗಲ್ ಗ್ರಾಮದಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೋರಗಲ್ ಗ್ರಾಮದಲ್ಲಿನ ಗೋಪಾಲ್ ಹಾದಿಮನಿ ಪತ್ನಿ ಜಯಾ, ಜುಲೈ 6ರಂದು ಬ್ಲಾಕ್ ಫಂಗಸ್ ನಿಂದಾಗಿ ಸಾವನ್ನಪ್ಪಿದ್ದರು. ಇದರಿಂದ ಮಾನಸಿಕವಾಗಿ ಅವರ ಪತಿ ಗೋಪಾಲ ಹಾದಿಮನಿ ನೊಂದಿದ್ದರು. ಇದೇ ಕೊರಗಿನಲ್ಲಿ ಖಿನ್ನತೆಗೂ ಒಳಗಾಗಿದ್ದರು.

ಹೀಗೆ ಮಾನಸಿಕವಾಗಿ ನೊಂದಿದ್ದ ಗೋಪಾಲ ಹಾದಿಮನಿ, ತನ್ನ ಮಕ್ಕಳಾದ ಸೌಮ್ಯ ಹಾದಿಮನಿ(19), ಶ್ವೇತಾ ಹಾದಿಮನಿ (16), ಸಾಕ್ಷಿ ಹಾದಿಮನಿ(11) ಹಾಗೂ ಸೃಜನ ಹಾದಿಮನಿ ( 8) ಎಂಬ ನಾಲ್ಕು ಮಕ್ಕಳಿಗೆ ವಿಷ ನೀಡಿ, ತಾವು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಂಕೇಶ್ವರ ಪೊಲೀಸರು, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!