


ಅಳಿಕೆ: ಬಂಟರ ಸಂಘ, ಅಳಿಕೆ ಇವರ ಆಶ್ರಯದಲ್ಲಿ ಸ್ನೇಹಕೂಟ–2025 ಕಾರ್ಯಕ್ರಮವು ಡಿಸೆಂಬರ್ 28ರಂದು (ಆದಿತ್ಯವಾರ) ಚಂದಾಡಿ ಅಳಿಕೆಯ ಸಾಯಿಗೀತಾರ ಅವರ ನಿವಾಸದಲ್ಲಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ನಡೆಯಲಿದೆ.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ದಿ. ಲಕ್ಷ್ಮಣ ಶೆಟ್ಟಿ ಅಳಿಕೆ ಅವರ ಸ್ಮರಣಾರ್ಥ ಗಾನ ವೈಭವ ಕಾರ್ಯಕ್ರಮ ಆಯೋಜಿಸಲಾಗಿದೆ. ಭಾಗವತಿಕೆಯಲ್ಲಿ ಪಟ್ಲ ಸತೀಶ್ ಶೆಟ್ಟಿ, ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ, ಭರತ್‌ರಾಜ್ ಶೆಟ್ಟಿ ಸಿದ್ಧಕಟ್ಟೆ ಹಾಗೂ ಪ್ರಶಾಂತ್ ಶೆಟ್ಟಿ ವಗೆನಾಡು ಭಾಗವಹಿಸಲಿದ್ದು, ಚೆಂಡೆ ವಾದನದಲ್ಲಿ ಕಲಾವಿದರು ಮೆರುಗು ನೀಡಲಿದ್ದಾರೆ. ಮದ್ದಳೆ ವಾದನವನ್ನು ಮಯೂರ್ ನಾಯ್ಡ ನಿರ್ವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಮಿತ್ತಳಿಕೆ ಸೂರ್ಯನಾಥ ಆಳ್ವ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕಳ ಮಲಾರುಬೀಡು, ಬಂಟರ ಸಂಘ ವಿಟ್ಲ ವಲಯದ ಅಧ್ಯಕ್ಷ ರಾಜೀವ್ ಭಂಡಾರಿ ಹಾಗೂ ಉದ್ಯಮಿ ಪ್ರಭಾಕರ ಶೆಟ್ಟಿ ದಂಬೆಕಾನ ಭಾಗವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ತನು–ಮನ–ಧನಗಳಿಂದ ಸಹಕರಿಸುವಂತೆ ಸಂಘದ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ. ಸರ್ವ ಬಂಟ ಬಾಂಧವರಿಗೆ ಆದರದ ಸ್ವಾಗತವನ್ನು ಬಂಟರ ಸಂಘ, ಅಳಿಕೆ, ಮಹಿಳಾ ಬಂಟರ ಸಂಘ, ಅಳಿಕೆ ಹಾಗೂ ಯುವ ಬಂಟರ ಸಂಘ, ಅಳಿಕೆ ಇವರ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಸದಸ್ಯರು ಕೋರಿದ್ದಾರೆ.








