



ಇಡ್ಕಿದು: ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮ ಪಂಚಾಯತ್ ವ್ಯಾಪ್ತಿಯ ಇಡ್ಕಿದು ಗ್ರಾಮದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮಿತ್ತೂರು ಇಲ್ಲಿ ನಿರ್ಮಾಣವಾಗುತ್ತಿರುವ ನೂತನ ಸಭಾಭವನಕ್ಕೆ ಫ್ರೆಂಡ್ಸ್ ಕ್ಲಬ್ (ರಿ) ಮಿತ್ತೂರು ಇದರ ವತಿಯಿಂದ ನಡೆದ 65ಕೆಜಿ ವಿಭಾಗದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಮತ್ತು ಅದೃಷ್ಟ ಚೀಟಿಯಲ್ಲಿ ಉಳಿಕೆಯಾದ ಮೊತ್ತ ರೂ1.00ಲಕ್ಷ (ಒಂದು ಲಕ್ಷ ರೂಪಾಯಿ)ವನ್ನು ಮುಖ್ಯೋಪಾಧ್ಯಾಯರಾದ ಶ್ರೀಮತಿ ಸರೋಜ ಎ , ಸಹಶಿಕ್ಷಕರಾದ ಸಂಜೀವ ನಾಯ್ಕ , ಶ್ರೀಮತಿ ವಿಮಲ ನಾಗೇಶ ಸಾಣಿಕಟ್ಟಾ , ಶ್ರೀಮತಿ ಜೂಲಿಯಾನ ಮೇವಿಸ್ ಡಿಸೋಜ, ಶ್ರೀಮತಿ ರೇಷ್ಮಾ ಹೆಚ್ ಎಂ, ಶ್ರೀಮತಿ ಪೂರ್ಣಿಮಾ ಕೆ, ಶ್ರೀಮತಿ ಅಶ್ವಿನಿ ಹಾಗೂ ಶಾಲಾ ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ಆದಂ ಮಿತ್ತೂರು ಇವರ ಸಮ್ಮುಖದಲ್ಲಿ ನಗದನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರು ಹಾಗೂ ಮಿತ್ತೂರು ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಎಂ ಸುಧೀರ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ವಸಂತ ಪೂಜಾರಿ, ಕ್ರೀಡಾ ಕಾರ್ಯದರ್ಶಿ ಈಶ್ವರ ಗೌಡ, ಸದಸ್ಯರುಗಳಾದ ಗಂಗಾಧರ ಸುವರ್ಣ, ದಾಮೋದರ ಶೆಟ್ಟಿ, ಸುಧಾಕರ ಗೌಡ,ವಿನೋದ್ ಗಾಣದಕೊಟ್ಯ, ವೆಂಕಪ್ಪ ಗೌಡ, ಜಯಚಂದ್ರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.








