Wednesday, November 11, 2026
spot_imgspot_img
spot_imgspot_img

ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ವಾಲಿಬಾಲ್ ತಂಡ VFC ವಿಟ್ಲ ಇದರ ವತಿಯಿಂದ ದೀಪಾವಳಿ ಹಬ್ಬದ ಆಚರಣೆ

- Advertisement -
- Advertisement -

ವಿಟ್ಲ: ನವೆಂಬರ್ 10 ಸಂಜೆ ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ವಾಲಿಬಾಲ್ ತಂಡ VFC ವಿಟ್ಲ ಇದರ ವತಿಯಿಂದ ದೀಪಾವಳಿ ಹಬ್ಬದ ಆಚರಣೆ ರಾತ್ರಿ ವಿಟ್ಲ ಶಾಲೆಯ ಮೈದಾನದಲ್ಲಿ ನಡೆಯಿತು.

VFC ತಂಡದ ಹಿರಿಯ ಆಟಗಾರರಾದ ವಿಜಯ ವಿಟ್ಲ, ಅಶ್ರಫ್ ವಿಟ್ಲ, ಹರೀಶ್ ವಿಟ್ಲ,ರಾಜು ವಿಟ್ಲ ಉಪಸ್ಥಿತರಿದ್ದರು.

VFC ತಂಡದ ಹಿಂದಿನ ವೈಭವದ ದಿನಗಳನ್ನು ಮೆಲುಕು ಹಾಕಿದ ವಿಜಯ ವಿಟ್ಲ ತಂಡದ ಆಟಗಾರರು ರಾಜ್ಯ ರಾಷ್ಟ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ವಿಟ್ಲ ಕ್ಕೆ ಗೌರವ ತಂದಿದ್ದು ಇನ್ನು ಮುಂದಿನ ದಿನಗಳಲ್ಲಿ ಕೂಡ ಯುವ ಆಟಗಾರು ತಂಡದ ಹೆಸರನ್ನು ಉಳಿಸುವ ಪ್ರಯತ್ನ ಮಾಡಬೇಕು ಮತ್ತು ರಾಜ್ಯ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಯಾಗುವಂತೆ ಸಾಧನೆ ಮಾಬೇಕು ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಇದರ ಅಧ್ಯಕ್ಷ ತಾರಾನಾಥ ವಿಟ್ಲ, ಸ್ವಸ್ತಿಕ್ ಫ್ರೆಂಡ್ಸ್ ಇದರ ಸಲಹೆಗಾರ ವಿಶ್ವನಾಥ್ ಅಳಿಕೆ, ಜೀವನ್ ವಿಟ್ಲ, ಕಾರ್ಯಕ್ರಮ ಸಂಯೋಜಕ ಆಕಾಶ್ ವಿಟ್ಲ , ರಾಹುಲ್ ಅಳಿಕೆ ಹಾಗೂ VFC ತಂಡದ ಯುವ ಆಟಗಾರು ಉಪಸ್ಥಿತರಿದ್ದರು. ವಿಘ್ನೇಶ್ ಕಾಮತ್ ಪೂಜಾ ಕಾರ್ಯಕ್ರಮ ನೆರವೇರಿಸಿದರು.

- Advertisement -

Related news

error: Content is protected !!