Saturday, June 28, 2025
spot_imgspot_img
spot_imgspot_img

ಇನ್ಮುಂದೆ ಅಡಿಕೆ ಮರ ಹತ್ತಿ ಮದ್ದು ಸಿಂಪಡಣೆ ಮಾಡಬೇಕಾಗಿಲ್ಲ.. ಅಡಿಕೆ ಮರ ಹತ್ತಿ ಅಡಿಕೆ ಕೀಳಬೇಕೆಂದಿಲ್ಲ

- Advertisement -
- Advertisement -

ಅಡಿಕೆ-ತೆಂಗು ಕೊಯ್ಲು, ಕಟಾವು ಮತ್ತು ಮದ್ದು ಸಿಂಪಡಣೆ, ಡಬಲ್‌ ಹೆಡ್‌, ಡಬಲ್‌ ಮೈಲೇಜ್‌, ವೇಗದ ಕೆಲಸ, ಸಮಯದ ಉಳಿತಾಯ ಇವೆಲ್ಲವೂ ನಿಮ್ಮದಾಗಬೇಕೆ..?

ಇಂದೇ ಹೈಟೆಕ್‌ ದೋಟಿ ಖರೀದಿಸಿ.. ಸ್ವಾವಲಂಬಿಯಾಗಿ ಕೃಷಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿ

ಕೃಷಿ ಪ್ರಿಯರಿಗಾಗಿ ಹೊಸ ತಂತ್ರಜ್ಞಾನವನ್ನು ಪರಿಚಯಿಸುತ್ತಿದ್ದಾರೆ ಬಾಲಸುಬ್ರಹ್ಮಣ್ಯ ಭಟ್‌.. ಏನಿದು ಹೊಸ ಯಂತ್ರ..? ಯಾವ ರೀತಿಯಲ್ಲಿ ಇದನ್ನು ಕೃಷಿ ಕ್ಷೇತ್ರದಲ್ಲಿ ಬಳಸಬಹುದು.. ಈ ಬಗ್ಗೆ ಎಲ್ಲಾ ಮಾಹಿತಿಗಳು ಇಲ್ಲಿವೆ.

ಇನ್ಮುಂದೆ ಅಡಿಕೆ ಮರ ಹತ್ತಿ ಮದ್ದು ಸಿಂಪಡಣೆ ಮಾಡಬೇಕಾಗಿಲ್ಲ.. ಅಡಿಕೆ ಮರ ಹತ್ತಿ ಅಡಿಕೆ ಕೀಳಬೇಕಿಂದಿಲ್ಲ.. ಯಾಕೆಂದ್ರೆ ಅಡಿಕೆ ಕೃಷಿಕರಿಗಾಗಿ ಪರಿಚಯಿಸುತ್ತಿದೆ ಹೊಸ ಹೈಟೆಕ್‌ ದೋಟಿ..

ಈ ದೋಟಿಯು ಮಾನವನ ಸುರಕ್ಷತೆಯ ದೃಷ್ಟಿಯಿಂದ ಕೆಲಸಮಾಡುತ್ತದೆ. ಮಳೆ ಗಾಲದಲ್ಲಿ ಅಡಿಕೆ ಮರ ಪಾಚಿ ಹಿಡಿದು ಅಡಿಕೆ ಮರವೇರಲು ಕಷ್ಟ ಪಡುವ ಅದೆಷ್ಟೋ ಕಾರ್ಮಿಕರನ್ನು ನಾವು ನೋಡ್ತೇವೆ… ಅಡಿಕೆ ಮರದಿಂದ ಚಾರಿ ಬಿದ್ದು, ಬೆನ್ನುಮೂಳೆ, ಹಾಗೂ ಕೈಕಾಲು ಮುರಿದು ದೇಹದ ಸ್ಥಿಮಿತ ಕಳೆದುಕೊಂಡು ಜೀವನ ಪೂರ್ತಿ ನರಕಯಾತನೆ ಅನುಭವಿಸುವ ಅದೆಷ್ಟೋ ಜನರನ್ನು ಇಂದಿಗೂ ನೋಡುತ್ತಲೇ ಇದ್ದೇವೆ.. ಇದರಿಂದ ಅದೆಷ್ಟೋ ಸಾವು ನೋವುಗಳು ಸಂಭವಿಸಿ, ಇಡೀ ಜೀವನವೇ ನರಳಾಡುವ ಪರಿಸ್ಥಿತಿ ಎದುರಾಗುತ್ತಿವೆ. ಇದರಿಂದ ಭಯಭೀತರಾದ ಕಾರ್ಮಿಕರು ಯಾರೂ ಅಡಿಕೆ ಮರ ಹತ್ತಲು ಒಪ್ಪಿಕೊಳ್ಳುವುದಿಲ್ಲ.. ಇದರಿಂದ ಅಡಿಕೆ ಕೈಷಿಕರಿಗೆ ಇಂದು ಕಾರ್ಮಿಕರ ಕೊರತೆ ಉಂಟಾಗಿದೆ.

ಇನ್ಮುಂದೆ ಯಾರೂ ಈ ಸಮಸ್ಯೆಗಳ ಬಗ್ಗೆ ಚಿಂತಿಸಬೇಕಿಲ್ಲ.. ಯಾಕೆಂದರೆ ನಿಮ್ಮ ಮನೆಯ ಅಡಿಕೆ ಮರಗಳಿಗೆ ನೀವೇ ಮದ್ದು ಸಿಂಪಡಿಸಬಹುದು.. ನಿಮ್ಮ ಅಡಿಕೆ ಮರಗಳಿಂದ ನೀವೇ ಅಡಿಕೆ ಕೀಳಬಹುದು.. ಅದು ಹೇಗೆ ಅನ್ನೋ ಪ್ರಶ್ನೆ ನಿಮ್ಮಲ್ಲಿ ಕಾಡಿದ್ಯಾ..? ಎಲ್ಲದಕ್ಕೂ ಪರಿಹಾರವೆಂಬಂತೆ ಹೈಟೆಕ್‌ ದೋಟಿಯನ್ನು ಖರೀದಿಸಿ..

ಹೈಟೆಕ್‌ ದೋಟಿ.. ಇದು ಬಿದಿರು ದೋಟಿಯ ಮಾದರಿಯಲ್ಲಿಯೇ ಹೊಸ ತಂತ್ರಜ್ಞಾನದ ಮೂಲಕ ತಯಾರಿಸಲಾಗಿದೆ. ಎಷ್ಟು ಎತ್ತರದ ಅಡಿಕೆ ಮರಗಳಿಗೂ ಉಪಯೋಗಿಸಬಹುದು.. ದೋಟಿಯನ್ನು ಯಾವ ಎತ್ತರಕ್ಕೂ ಬೇಕಾದ್ರೂ ಫಿಕ್ಸ್‌ ಮಾಡುವ ಮೆತಡ್‌ ಲಭ್ಯವಿದೆ. ನಿಂತ ಜಾಗದಿಂದ ಒಂದೇ ಕೈಯಲ್ಲಿ ಕೆಲಸ ಮಾಡುವ ಈ ಹೈಟೆಕ್‌ ದೋಟಿಯನ್ನು ಒಂದೇ ಕೈಯಿಂದ ಪ್ರೆಸ್‌ ಮಾಡುವ ಮೂಲಕ ಮದ್ದು ಸಿಂಪಡಣೆ ಮಾಡಬಹುದು. 360 ಡಿಗ್ರಿ ರೊಟೇಷನ್‌ ಮಾಡುವ ಮೂಲಕ ಎಲ್ಲಾ ಅಡಿಕೆ ಗಿಡಗಳಿಗೂ ಒಂದೇ ಜಾಗದಿಂದ ಮದ್ದು ಸಿಂಪಡಣೆ ಮಾಡಬಹುದು. ದಿನದಲ್ಲಿ ಸುಮಾರು ನಾಲ್ಕು ಎಕ್ರೆ ಅಡಿಕೆ ಗಿಡಗಳಿಗೆ ಮದ್ದು ಸಿಂಪಡಣೆ ಮಾಡಬಹುದು.

ಇದೇ ಹೈಟೆಕ್‌ ದೋಟಿಗೆ ಕತ್ತಿ ಅಳವಡಿಸಿ, ಅಡಿಕೆ ಮರಗಳಿಂದ ಅಡಿಕೆಯನ್ನು ಸುಲಭವಾಗಿ ಕೀಳಬಹುದು. ಈ ಹೈಟೆಕ್‌ ದೋಟಿಗೆ ಕತ್ತಿಯನ್ನು ಎಲ್ಲಾ ಅಡಿಕೆ ಮರಗಳ ಎತ್ತರಕ್ಕೆ ಅನುಗುಣವಾಗುವಂತೆ ಫಿಕ್ಸ್ ಮಾಡಬಹುದು. ಸುಮಾರು 60 ರಿಂದ 80 ಅಡಿ ಎತ್ತರದ ಮರಗಳಿಂದ ಅಡಿಕೆ ಕೊಯ್ಲು ಮಾಡಬಹುದು.

ಕೊಳೆ ರೋಗದಿಂದ ನಷ್ಟ ಉಂಟಾದ ಅಡಿಕೆ ಕೈಷಿಕರಿಗೆ ಹೈಟೆಕ್‌ ದೋಟಿ ಶೇಕಡಾ 100 ರಷ್ಟು ಫಲದಾಯಕವಾಗಿದೆ. ಎಲ್ಲಾ ಅಡಿಕೆ ಕೃಷಿಕರು ಸ್ವಾವಲಂಬಿಗಳಾಗಿ ತುಂಬಾ ಸಂತೋಷದಾಯಕವಾಗಿ ಹೈಟೆಕ್‌ ದೋಟಿಯ ಮೂಲಕ ಪ್ರಗತಿ ಕಂಡಿದ್ದಾರೆ. ಅಡಿಕೆ ಮಾತ್ರವಲ್ಲದೆ ಈ ದೋಟಿಯಲ್ಲಿ ತೆಂಗು, ಮಾವು ಹಲಸು ಇನ್ನಿತರ ಹಣ್ಣುಗಳನ್ನು ತುಂಬಾ ಸುಲಭವಾಗಿ ಕೀಳಬಹುದು.

ಕಳೆದ ಆರು ವರ್ಷಗಳಿಂದ ಮಾರಕಟ್ಟೆಯಲ್ಲಿ ಲಭ್ಯವಿರುವ ಈ ಹೊಸ ಹೈಟೆಕ್‌ ದೋಟಿ 30,000/- ದಿಂದ 85,000/- ವರೆಗೆ ಉತ್ತಮ ಗುಣಮಟ್ಟದೊಂದಿಗೆ ಕೈಗೆಟಕುವ ದರದಲ್ಲಿ ಲಭ್ಯವಿದೆ.

ಭಾರತವು ಕೃಷಿ ಕ್ಷೇತ್ರದಲ್ಲಿ ಸಂಶೋಧಿಸಿ ಮಾರುಕಟ್ಟೆಗೆ ಪರಿಚಯಿಸಿದ ’ತ್ರೀ ಹೆಡ್‌ ಬ್ರಶ್‌ ಕಟರ್‌’ ಮಿಷನ್‌ ಹುಲ್ಲು ಕತ್ತರಿಸಲು ತುಂಬಾ ಸಹಾಯಕವಾಗಿದೆ. ತೋಟದಲ್ಲಿ ಹುಲ್ಲು ತೆಗೆಯಲು ಸುರಕ್ಷಿತವಾಗಿ ಹಾಗೂ ಸ್ವಚ್ಛ ದಾಯಕವಾಗಿ ಈ ಮಿಷನ್‌ ಕೆಲಸ ಮಾಡುತ್ತದೆ. ಈ ಮಿಷನ್‌ ವೆಚ್ಚ 35,000/-.

ಡಬಲ್‌ ಹೆಡೆ‌ಡ್‌ ಬ್ರಶ್‌ ಕಟರ್‌. ಈ ಮಿಷನನ್ನು ಎಡ ಮತ್ತು ಬಲಬದಿಗಳಿಗೆ ಕೈಯಲ್ಲಿ ತಿರುಗಿಸಿಕೊಂಡು ತುಂಬಾ ವೇಗವಾಗಿ ಹುಲ್ಲು ಕಟಾವು ಮಾಡಲು ಸಹಾಯಕವಾಗಿದೆ. ಉತ್ತಮ ಗುಣಮಟ್ಟದ ಈ ಮಿಷನ್‌ ನ ವೆಚ್ಚ 30,000/- ಆಗಿದೆ. ಜೊತೆಗೆ ಈ ಎಲ್ಲಾ ಮಿಷನ್‌ಗಳ ಸರ್ವೀಸ್‌ ಕೂಡ ಲಭ್ಯವಿದೆ. ಜೊತೆಗೆ ಸರಕಾರದಿಂದ ಸಬ್ಸಿಡಿ ಸೌಲಭ್ಯವೂ ಲಭ್ಯವಿದೆ.

ಅಡಿಕೆ, ತೆಂಗು ಕೊಯ್ಲು, ಕಟಾವು ಮತ್ತು ಮದ್ದು ಸಿಂಪಡಣೆ, ಡಬಲ್‌ ಹೆಡ್‌, ಡಬಲ್‌ ಮೈಲೇಜ್‌, ವೇಗದ ಕೆಲಸ, ಸಮಯದ ಉಳಿತಾಯ ಇವೆಲ್ಲವೂ ನಿಮ್ಮದಾಗಬೇಕೆ ಹಾಗಾದ್ರೆ ಹೆಚ್ಚಿನ ಮಾಹಿತಿಗಾಗಿ ಈ ಕೂಡಲೇ ಸಂಪರ್ಕಿಸಿ:
9606142520, 7259350487

- Advertisement -

Related news

error: Content is protected !!