


ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘ ಪುತ್ತೂರು, ಸುಳ್ಯದ ಬೀರಮಂಗಲದಲ್ಲಿ ನೂತನವಾಗಿ ನಿರ್ಮಾಣವಾದ ಜೇನು ಸಂಸ್ಕರಣಾ ಘಟಕದಲ್ಲಿ ಗಣಹೋಮ ಮತ್ತು ಲಕ್ಷ್ಮೀಪೂಜೆಯು ಜ.25 ರಂದು ನಡೆಯಿತು.

ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಪೂಜಾ ಕಾರ್ಯ ನೆರವೇರಿತು.ಈ ಸಂದರ್ಭದಲ್ಲಿ ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರ ಕೋಲ್ಟಾರ್ ಉಪಾಧ್ಯಕ್ಷ ರಾಜಾರಾಮ ಶೆಟ್ಟಿ, ವ್ಯವಸ್ಥಾಪನಾ ನಿರ್ದೇಶಕ ತಿಮ್ಮಯ್ಯ ಪಿಂಡಿಮನೆ,ನಿರ್ದೇಶಕರಾದ ಜಿ.ಪಿ. ಶ್ಯಾಮ್ ಭಟ್,ಪಾಂಡುರಂಗ ಹೆಗ್ಡೆ, ಸುಂದರ ಗೌಡ ಕೆ,ತನಿಯಪ್ಪ ಗೌಡ ಡಿ.ಜನಾರ್ಧನಚೂಂತಾರು, ಗೋವಿಂದ ಭಟ್,ಶಿವಾನಂದ, ಶ್ರೀಮತಿ ಸರಸ್ವತಿ,ಶ್ರೀಮತಿ ಸುಶೀಲ,ಶಂಕರ ಪೆರಾಜೆ,ಪುಟ್ಟಣ್ಣ ಗೌಡ
ಮನಮೋಹನ ವೆಂಕಟ್ರಮಣ ಕ್ರೆಡಿಟ್ ಕೋ.ಆ.ಸೊಸೈಟಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ, ನಿವೃತ್ತ ಕೈಗಾರಿಕಾ ವಿಸ್ತರಣಾಧಿಕಾರಿ ವೀರಪ್ಪ ಗೌಡ, ಸಂಘದ ಸಿಬ್ಬಂದಿ ವರ್ಗದವರು ಹಾಗು ಮತ್ತಿತರರು ಉಪಸ್ಥಿತರಿದ್ದರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ನೂತನ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿದರು.
ಅತ್ಯಾಧುನಿಕ ವ್ಯವಸ್ಥೆಗಳನ್ನು ಒಳಗೊಂಡು ಜೇನು ಸಂಸ್ಕರಣಾ ಘಟಕವು ಅತೀ ಶೀಘ್ರದಲ್ಲಿ ಮುಂದಿನ ದಿನದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಕೋಲ್ಟಾರ್ ತಿಳಿಸಿದ್ದಾರೆ.