Monday, June 8, 2026
spot_imgspot_img
spot_imgspot_img

ನಾಲ್ವರು ಕೇರಳ ವಿದ್ಯಾರ್ಥಿಗಳೇ ಗ್ಯಾಂಗ್ ರೇಪ್ ಮಾಡಿರೋ ಶಂಕೆ; ಒಂದು ಸುಳಿವಿನಿಂದ ಆರೋಪಿಗಳ ವಿವರ ಪತ್ತೆ

- Advertisement -
- Advertisement -

ಮೈಸೂರು : ರಾಜ್ಯವನ್ನೇ ಬೆಚ್ಚಿ ಬೀಳಿಸಿರುವಂತ ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ಸಂಬಂಧ ಪೊಲೀಸರು ಮಹತ್ವದ ಮಾಹಿತಿಯನ್ನು ಕಲೆಹಾಕಿದ್ದಾರೆ. ಆಗಸ್ಟ್.24ರಂದು ನಡೆದಂತ ಇಂಜಿನಿಯರಿಂಗ್ ಪರೀಕ್ಷೆಗೆ ಗೈರು ಹಾಜರಾಗಿದ್ದಂತ ನಾಲ್ವರು ಕೇರಳ ವಿದ್ಯಾರ್ಥಿಗಳೇ ಗ್ಯಾಂಗ್ ರೇಪ್ ಮಾಡಿರೋ ಶಂಕೆಯನ್ನು ವ್ಯಕ್ತ ಪಡಿಸಿದ್ದಾರೆ. ಈ ಮೂಲಕ ಅವರ ಪತ್ತೆಗೆ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

ಮೈಸೂರು ಗ್ಯಾಂಗ್ ರೇಪ್ ಪ್ರಕರಣ ಸಂಬಂದ ರಚಿಸಲಾಗಿದ್ದಂತ ಬೆಂಗಳೂರು ಮತ್ತು ಮೈಸೂರು ಪೊಲೀಸ್ ಅಧಿಕಾರಿಗಳ ತಂಡವು, ಇದೀಗ ಅತ್ಯಾಚಾರ ಆರೋಪಿಗಳ ಸಂಬಂಧ ಮಹತ್ವದ ಮಾಹಿತಿಯನ್ನು ಕಲೆ ಹಾಕಿದೆ. ಗ್ಯಾಂಗ್ ರೇಪ್ ನಡೆದಂತ ದಿನದಂದು ಇಂಜಿನಿಯರಿಂಗ್ ಪರೀಕ್ಷೆ ಕೂಡ ನಡೆದಿತ್ತು. ಈ ಪರೀಕ್ಷೆಗೆ ನಗರದಲ್ಲೇ ಇದ್ದರೂ ನಾಲ್ವರು ಕೇರಳದ ವಿದ್ಯಾರ್ಥಿಗಳು ಹಾಜರಾಗಿರಲಿಲ್ಲ.

ಹೀಗೆ ಇಂಜಿನಿಯರಿಂಗ್ ಪರೀಕ್ಷೆಗೆ ಹಾಜರಾಗದೇ ಇರೋ ನಾಲ್ವರು ಕೇರಳದ ಇಂಜಿನಿಯರಿಂಗ್ ವಿದ್ಯಾರ್ಥಿಗಳೇ ಅತ್ಯಾಚಾರ ಆರೋಪಿಗಳು ಎಂಬುದಾಗಿ ಶಂಕಿಸಲಾಗಿದೆ. ಆಗಸ್ಟ್.24ರಂದು ನಗರದಲ್ಲೇ ಇದ್ದಂತ ಇಂಜಿನಿಯರಿಂಗ್ ವಿದ್ಯಾರ್ಥಿಗಳು, ಘಟನೆ ನಡೆದ ಒಂದು ದಿನದ ಬಳಿಕ, ಈಗ ನಾಪತ್ತೆಯಾಗಿರೋದಾಗಿ ತಿಳಿದು ಬಂದಿದೆ. ಆ ಕೇರಳ ಮೂಲಕ ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

- Advertisement -

Related news

error: Content is protected !!