Tuesday, September 28, 2021
spot_imgspot_img
spot_imgspot_img

ರಿಕ್ಷಾದಲ್ಲಿ ಅಕ್ರಮ ಗಾಂಜಾ ಸಾಗಟ ಪತ್ತೆ. ವೀರಕಂಬದ ಬೆಂಜಂತಿಮಾರು ನಲ್ಲಿ ಒರ್ವ ಬಂಧನ.!

- Advertisement -
- Advertisement -

ವಿಟ್ಲ: ಖಚಿತ ಮಾಹಿತಿ ಮೇರೆಗೆ ರಿಕ್ಷಾದಲ್ಲಿ ಗಾಂಜಾ ಸಾಗಾಟ ಹಾಗೂ ಮಾರಾಟ ಮಾಡಲು ಯತ್ನಿಸಿದ ಕೇರಳ ಮೂಲದ ಕೈಕಂಬ ನಿವಾಸಿ ಮಹಮ್ಮದ್ ಅಲಿ ಯಾನೆ ಅಸ್ರು (27) ಎಂಬಾತನನ್ನು ವೀರಕಂಬ ಗ್ರಾಮದ ಬೆಂಜಂತಿಮಾರು ಎಂಬಲ್ಲಿ ಬಂಧಿಸಲಾಗಿದೆ.

ರಿಕ್ಷಾದಲ್ಲಿ ಸುಮಾರು 840 ಗ್ರಾಂ ನಷ್ಟು ಗಾಂಜಾ ಪತ್ತೆಯಾಗಿದ್ದು, ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕುದ್ದುಪದವು ಗಮನ ಬೇರೆಡೆಗೆ ಸೆಳೆದು ಹಣ ಕಳವು ಮಾಡಿದ ಪ್ರಕರಣದಲ್ಲಿ ಬಾಗಿಯಾಗಿದ್ದನ್ನು ಒಪ್ಪಿಕೊಂಡಿದ್ದಾನೆ. ಕೇರಳದಲ್ಲಿ ಸುಮಾರು 10 ಪ್ರಕರಣ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬಂಟ್ವಾಳ, ವಿಟ್ಲ ಠಾಣೆಯಲ್ಲಿ ತಲಾ ಒಂದು ಪ್ರಕರಣವಿದೆ.

ಡಿಸಿಐಬಿ ಪೊಲೀಸ್ ನಿರೀಕ್ಷರಾದ ಚೆಲುವರಾಜು ಅವರಿಗೆ ಲಭಿಸಿದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳಾದ ಲಕ್ಷ್ಮಣ್ ಕೆಜಿ, ಉದಯ ರೈ, ಪ್ರವೀಣ್ ಎಂ., ತಾರಾನಾಥ್, ಪ್ರವೀಣ್ ರೈ, ಚಾಲಕ ಶೋನ್ ಷಾ, ಸುರೇಶ್ ಅವರ ತಂಡ ಬಂದಿಸುವಲ್ಲಿ ಯಶಸ್ವಿಯಾಗಿದೆ. ವಿಟ್ಲ ಠಾಣೆಯ ಸಿಬ್ಬಂದಿಗಳಾದ ಜಯರಾಮ, ಪ್ರಸನ್ನ, ಲೋಕೇಶ್ ಸಹಕರಿಸಿದರು.

- Advertisement -
- Advertisement -

MOST POPULAR

HOT NEWS

Related news

error: Content is protected !!