Monday, April 29, 2024
spot_imgspot_img
spot_imgspot_img

ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ- 8 ಕೆಜಿ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ಸ್ವಿಫ್ಟ್ ಕಾರು ವಶ

- Advertisement -G L Acharya panikkar
- Advertisement -

ಸುಳ್ಯ(ನ6): ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಸುಳ್ಯ ಪೊಲೀಸರು, ಬಂಧಿತರಿಂದ 8 ಕೆಜಿ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ಸ್ವಿಫ್ಟ್ ಕಾರನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳನ್ನು ಕಾಸರಗೋಡು ಮುಂಡೋಳು ಅಟ್ಟಂಚಾಲ್ಪ ಮುರುವ ನಿವಾಸಿ ಎಮ್ ಎ ಅಬ್ಬಾಸ್ ( 63 ) ಹಾಗೂ ಕಾಸರಗೋಡು ಮೋಯಿನಾಬಾದ್ ಅಬ್ದುಲ್ ಕುನ್ನಿ ( 50 ) ಎಂದು ಗುರುತಿಸಲಾಗಿದೆ.

8 ಕೆಜಿ 208ಗ್ರಾಂ ಗಾಂಜಾದ ಮೌಲ್ಯ 2 ಲಕ್ಷ ಎಂದು ಅಂದಾಜಿಸಲಾಗಿದ್ದು , ಸ್ವಿಫ್ಟ್ ಕಾರು ( KL 14V7008 ) ಅನ್ನು ವಶಕ್ಕೆ ಪಡೆದಿದ್ದಾರೆ. ಸರ್ಕಲ್ ಇನ್ಸ್‌ಪೆಕ್ಟರ್‌ ನವೀನ್‌ಚಂದ್ರ ಜೋಗಿಯವರ ಮಾರ್ಗದರ್ಶನದಲ್ಲಿ ಎಸ್.ಐ. ಹರೀಶ್ ಎಂ.ಆರ್. ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದ್ದಾರೆ.

- Advertisement -

Related news

error: Content is protected !!