Wednesday, May 1, 2024
spot_imgspot_img
spot_imgspot_img

ವಿಟ್ಲ: ಗ್ಯಾಸ್ ಏಜೆಂಟ್ ಮೇಲೆ ಹಲ್ಲೆ ಪ್ರಕರಣ; ಯಾವುದೇ ರೀತಿಯ ಗೂಂಡಾ ಸಂಸ್ಕೃತಿಯನ್ನು ಸಹಿಸುವಂತಹ ಜನರು ಈ ಕ್ಷೇತ್ರದಲ್ಲಿ ಇಲ್ಲ- ಅರುಣ್‌ ಕುಮಾರ್‌ ಪುತ್ತಿಲ

- Advertisement -G L Acharya panikkar
- Advertisement -

ವಿಟ್ಲ: ಕಮರ್ಷಿಯಲ್ ಗ್ಯಾಸ್ ಅನ್ನು ಅಂಗಡಿಗಳಿಗೆ ಕೊಂಡೊಯ್ಯುತ್ತಿದ್ದ ವೇಳೆ ಮೇಗಿನಪೇಟೆಯ ಕೋಳಿ ಅಂಗಡಿಯ ಮಾಲಕನೋರ್ವ ಗ್ಯಾಸ್ ಸಪ್ಲೈ ವಿಚಾರಕ್ಕೆ ಸಂಬಂಧಿಸಿ ಮಾತಿಗಿಳಿದು ಅವಾಚ್ಯ ಶಬ್ದಗಳಿಂದ ಬೈದು, ನಿಂದಿಸಿ ತಂಡದೊಂದಿಗೆ ಹಲ್ಲೆ ನಡೆಸಿದ್ದಾರೆ ಆರೋಪಿಸಿ ಗ್ಯಾಸ್ ಏಜೆನ್ಸಿಯ ಸಿಬ್ಬಂದಿ ಸದಾನಂದರವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲ್ಲೆಗೊಳಗಾಗಿ ವಿಟ್ಲ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವ ಸದಾನಂದರವರನ್ನು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲರವರು ಭೇಟಿಯಾಗಿ ಗಾಯಳುವಿನಿಂದ ಮಾಹಿತಿ ಪಡೆದು, ಪ್ರಕರಣ ದಾಖಲಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.

ಗ್ಯಾಸ್‌ ವಿತರಕನ ಮೇಲೆ ಒಬ್ಬ ಮತಾಂಧ ಹಲ್ಲೆ ನಡೆಸಿದ್ದ ಘಟನೆ ನಡೆದಿದ್ದು, ಚುನಾವಣೆ ನಡೆದು ಕೆಲವು ಗಂಟೆಗಳ ಅಂತರದಲ್ಲಿ ವಿನಃಕಾರಣ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ್ದಾರೆ. ಯಾವುದೇ ರೀತಿಯ ಗೂಂಡಾ ಸಂಸ್ಕೃತಿಯನ್ನು ಸಹಿಸುವಂತಹ ಜನರು ಈ ಕ್ಷೇತ್ರದಲ್ಲಿ ಇಲ್ಲ. ಮತಾಂಧೆಯ ವ್ಯವಸ್ಥೆ ಅಡಿಯಲ್ಲಿ ಸಮಾಜದಲ್ಲಿ ಸಂಧಿಗ್ನತೆಯ, ಸಂಘರ್ಷದ ವಾತಾವರಣ ನಿರ್ಮಾಣ ಮಾಡುವ ಇರಾದೆ ನಿಮ್ಮಲ್ಲಿ ಇರಬಹುದು. ಆದರೆ ಯಾವತ್ತು ಕೂಡಾ ಅದಕ್ಕೆ ಅಸ್ಪದ ಕೊಡುವಂತಹ ಅವಕಾಶವನ್ನು ನಾವು ಈ ಕ್ಷೇತ್ರದಲ್ಲಿ ಕೊಡುವುದಿಲ್ಲ. ಇಡೀ ಹಿಂದೂ ಸಮಾಜ ಸದಾನಂದರ ಜೊತೆ ಇದೆ. ಹಲ್ಲೆ ನಡೆಸಿದ ಆರೋಪಿಯನ್ನು ತಕ್ಷಣ ಬಂಧಿಸಿ, ಕಾನೂನು ಕ್ರಮ ಕೈಗೊಂಡು ಪ್ರಕರಣ ದಾಖಲಿಸಬೇಕು. ಮುಂದಿನ ದಿವಸದಲ್ಲಿ ಇಂತಹ ಘಟನೆಗಳು ನಡೆದರೆ ಅದಕ್ಕೆ ಉತ್ತರ ಕೊಡುವಂತಹ ಕೆಲಸವನ್ನು ಮಾಡುತ್ತೇವೆ ಎಂದು ಅರುಣ್‌ ಕುಮಾರ್‌ ಪುತ್ತಿಲ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು.

ಈ ಸಂದರ್ಭದಲ್ಲಿ ಅರುಣ್‌ ಕುಮಾರ್‌ ಪುತ್ತಿಲ ಜೊತೆಗೆ ಪ್ರವೀಣ್‌ ಶೆಟ್ಟಿ ತಿಂಗಳಾಡಿ, ಅಕ್ಷಯ್‌ ರಜಪೂತ್‌, ಅಜಯ್‌, ಆಶಿತ್‌, ರಾಜ್‌ಶೇಖರ್‌ ಉಪಸ್ಥಿತರಿದ್ದರು.

- Advertisement -

Related news

error: Content is protected !!