Tuesday, April 23, 2024
spot_imgspot_img
spot_imgspot_img

“ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಬೆಂಕಿ” “ವಿಟ್ಲದ ಉಕ್ಕುಡ ದರ್ಬೆಯಲ್ಲಿ ನಡೆದ ಘಟನೆ”

- Advertisement -G L Acharya panikkar
- Advertisement -

ವಿಟ್ಲ: ಮನೆಯೊಳಗಡೆ ಗ್ಯಾಸ್ ಸಿಲಿಂಡರ್ ಅನಿಲ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಮನೆಮಂದಿ ಪವಾಢಸದೃಶ್ಯ ರೀತಿಯಲ್ಲಿ ಪಾರಾಗಿದ್ದು, ಮನೆ ಸಂಪೂರ್ಣವಾಗಿ ಧ್ವಂಸಗೊಂಡ ಘಟನೆ ವಿಟ್ಲ ಕಸಬಾ ಗ್ರಾಮದ ಉಕ್ಕುಡ ದರ್ಬೆಯಲ್ಲಿ ಸಂಭವಿಸಿದೆ.

ವಿಟ್ಲ ಕಸಬಾ ಉಕ್ಕುಡ ದರ್ಬೆ ನಿವಾಸಿ ಯೂಸುಪ್ ಅವರ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ಯೂಸುಪ್ ಅವರು ಸಿಲಿಂಡರ್ ಖಾಲಿಯಾಗಿದ್ದು, ಹೊಸ ಸಿಲಿಂಡರ್ ಅಳವಡಿಸಲು ಸಿಲಿಂಡರ್ ನ ಮುಚ್ಚಳ ತೆರೆಯುತ್ತಿದ್ದಂತೆ ಸೋರಿಕೆಯಾಗಿದೆ. ಬಳಿಕ ಬೆಂಕಿ ಕಾಣಿಸಿಕೊಂಡಿದೆ.

ಸ್ಥಳೀಯರು ಬೆಂಕಿ ನಂದಿಸಿದ್ದಾರೆ. ವಿದ್ಯುತ್ ಸಂಪರ್ಕ ಸಂಪೂರ್ಣ ಸುಟ್ಟು ಕರಕಲಾಗಿದೆ. ಇನ್ನಿತರ ವಿದ್ಯುತ್ ಉಪಕರಣಗಳು ಕೂಡಾ ಕರಕಲಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.

- Advertisement -

Related news

error: Content is protected !!