Saturday, June 28, 2025
spot_imgspot_img
spot_imgspot_img

ಗ್ಯಾಸ್ ಗೀಸರ್ ಸೋರಿಕೆ: ತಾಯಿ ಮಗ ಸಾವು..!

- Advertisement -
- Advertisement -

ರಾಮನಗರ : ಸ್ನಾನಕ್ಕೆಂದು ತೆರಳಿದ್ದ ವೇಳೆ ಗ್ಯಾಸ್ ಗೀಸರ್‌ನ ವಿಷಕಾರಿ ಕಾರ್ಬನ್ ಮೊನಾಕ್ಸೈಡ್ ಸೋರಿಕೆಯಿಂದಾಗಿ ಮಗ ಮತ್ತು ರಕ್ಷಣೆಗೆ ತೆರಳಿದ್ದ ತಾಯಿ ಮೃತಪಟ್ಟ ಘಟನೆ ಮಾಗಡಿ ಪಟ್ಟಣದ ಜ್ಯೂರಿನಗರದಲ್ಲಿ ನಡೆದಿದೆ.

ಮೃತಪಟ್ಟವರನ್ನು ಶೋಭಾ (40) ಮತ್ತು ಅವರ ಪುತ್ರ ದಿಲೀಪ್ (17) ಎಂದು ಗುರುತಿಸಲಾಗಿದೆ.

ರಾತ್ರಿ ಏಳು ಗಂಟೆ ಸುಮಾರಿಗೆ ದಿಲೀಪ್ ಸ್ನಾನದ ಕೊಠಡಿಯಲ್ಲಿರುವ ಗೀಸರ್ ಸ್ವಿಚ್ ಆನ್ ಮಾಡಿಕೊಂಡು ಸ್ನಾನಕ್ಕೆ ತೆರಳಿದ್ದರು. ಆಗ, ಕಿಟಕಿ ಇಲ್ಲದ ಕೊಠಡಿಯನ್ನು ಆವರಿಸಿದ ಕಾರ್ಬನ್ ಮೊನಾಕ್ಸೈಡ್ ನಿಂದಾಗಿ ದಿಲೀಪ್ ಪ್ರಜ್ಞೆ ತಪ್ಪಿ ಮೃತಪಟ್ಟಿದ್ದಾರೆ.

ಸ್ನಾನಕ್ಕೆ ಹೋದ ಮಗ ಎಷ್ಟೊತ್ತಾದರೂ ಬಂದಿಲ್ಲ ಎಂದು ತಾಯಿ ಶೋಭಾ ಅವರು, ಸ್ನಾನದ ಕೊಠಡಿ ಬಾಗಿಲು ತೆರೆದು ಒಳ ಹೋದಾಗ ಮಗ ಕೆಳಗೆ ಬಿದ್ದಿರುವುದನ್ನು‌ ಗಮನಿಸಿದ್ದಾರೆ. ಆತನ ಸ್ಥಿತಿ ಕಂಡು ಗಾಬರಿಗೊಂಡು ಅವರ, ಮಗನನ್ನು ಹೊರಕ್ಕೆ ಕರೆತರಲು ಯತ್ನಿಸಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ಅವರು ಸಹ ಅನಿಲ ಸೇವಿಸಿ ಪ್ರಜ್ಞೆ ತಪ್ಪಿ ಕೊನೆಯುಸಿರೆಳೆದಿದ್ದಾರೆ. ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement -

Related news

error: Content is protected !!