- Advertisement -
- Advertisement -




ಹೊಸದಿಲ್ಲಿ : ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ ತುಸು ಇಳಿಸುವ ಮೂಲಕ ತೈಲ ಕಂಪನಿಗಳು ಜನತೆಗೆ ಹೊಸ ವರ್ಷದ ಗಿಫ್ಟ್ ನೀಡಿವೆ.ಕಳೆದ ವರ್ಷವಿಡೀ ನಿರಂತರ ಏರಿಕೆ ಕಂಡಿದ್ದ ಎಲ್ಪಿಜಿ ಸಿಲಿಂಡರ್ ದರ ಹೊಸ ವರ್ಷದ ಮೊದಲ ದಿನವೇ ತುಸು ಇಳಿಕೆಯಾಗಿದೆ. ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ 14.50 ರೂಪಾಯಿಯಷ್ಟು ಇಳಿಕೆ ಕಂಡಿದೆ. ಇಂದಿನಿಂದಲೇ ಪರಿಷ್ಕೃತ ದರ ಜಾರಿಯಾಗಿದೆ.ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನ ಎಲ್ಪಿಜಿ ಸಿಲಿಂಡರ್ ಬೆಲೆ ಪರಿಷ್ಕರಣೆ ಮಾಡುತ್ತವೆ. ಅದರಂತೆ ಜನವರಿ 1ರಂದು ಪರಿಷ್ಕೃತ ದರ ಪ್ರಕಟಿಸಿವೆ. ವಾಣಿಜ್ಯ ಬಳಕೆಯ ಸಿಲಿಂಡರ್ ದರ ಮಾತ್ರ ಇಳಿಕೆಯಾಗಿದೆ. ಗೃಹ ಬಳಕೆಯ ಅಡುಗೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ದಿಲ್ಲಿಯಲ್ಲಿ ಎಲ್ಪಿಜಿ ಸಿಲಿಂಡರ್ 1,804 ರೂಪಾಯಿಗೆ ಸಿಗಲಿದೆ. ಹಿಂದಿನ ದರವು ಎಲ್ಪಿಜಿ ಸಿಲಿಂಡರ್ಗೆ 1,818 ರೂಪಾಯಿ 50 ಪೈಸೆ ಇತ್ತು.
- Advertisement -