Monday, April 29, 2024
spot_imgspot_img
spot_imgspot_img

ಮಂಗಳೂರು : ಮೀಟರ್ ಬಡ್ಡಿ ದಂಧೆಯವರ ಕಿರಿಕ್ ತಪ್ಪಿಸಲು ಬೀದಿ ಬದಿ ವ್ಯಾಪಾರಿಗಳು ಒಟ್ಟು ಸೇರಿ ಸಹಕಾರಿ ಸೊಸೈಟಿ ಪ್ರಾರಂಭ.

- Advertisement -G L Acharya panikkar
- Advertisement -

ಮಂಗಳೂರು : ಮಂಗಳೂರು ಅಂತ ಹೇಳಿದರೆ ಸಾಕು ಎಲ್ಲಾ ದಂಧೆಗಳು ಇಲ್ಲಿ ನಡೆಯುತ್ತಾ ಇದೆ ಗಾಂಜಾ ಮಟ್ಕಾ ,ಮಾಂಸ ದಂಧೆ, ಹೆಸರಿಲ್ಲದ ದಂಧೆ ಅಂತೂ ಇಲ್ಲಿ ನಡೆಯುತ್ತಾ ಇದೆ .ಆದರೆ ಇಲ್ಲಿ ಬಿಜೆಪಿ ,ಕಾಂಗ್ರೆಸ್ ನ ಅನೇಕ ಮುಖಂಡರು ಮೀಟರ್ ದಂಧೆಯಲ್ಲಿ ತೊಡಗಿದ್ದು ಏನು ಇಲ್ಲದ ಬಡಪಾಯಿಗಳ ಮೇಲೆ ಪೊಲೀಸ್ ಇಲಾಖೆಯ ಮುಖಂತರ ದೌರ್ಜನ್ಯ ನಡೆಸುತ್ತಿರುವುದು ಸಾಮಾನ್ಯ.ಇವತ್ತಿನ ಮಂಗಳೂರಿನ ಬಿಜೆಪಿಗರಂತೂ ಬಡ್ಡಿಯ ಹಣದಲ್ಲೇ ತೇಲುತಿರುವುದು ನಿಜವಾದ ಸಂಗತಿ . ಪೊಲೀಸ್ ಇಲಾಖೆಯಲ್ಲೂ ಮೀಟರ್ ಬಡ್ಡಿಗೆ ಹಣ ಕೊಡುವವರು ಸುಮಾರು ಜನ ಇದ್ದು ,ಪೊಲೀಸ್ ದರ್ಪದ ಮೂಲಕ ವಸೂಲಿ ಅಂತೂ ಸುಲಭವಾಗಿ ನಡೆಯುತ್ತಿದೆ .ಇದು ಎಲ್ಲಾ ಜನರಿಗೆ ತಿಳಿದ ವಿಷಯವೂ ಹೌದು .

ದೇಶದ ಅಗ್ರಗಣ್ಯ ಬ್ಯಾಂಕ್‌ಗಳಾದ ಕೆನರಾ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ವಿಜಯ ಬ್ಯಾಂಕ್ ಜನ್ಮತಾಳಿದ ಜಿಲ್ಲೆ ಇದೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ,ಆದರೆ ದಿನಕೂಲಿ ನೌಕರರಿಗೆ ,ಬೀದಿ ಬದಿ ವ್ಯಾಪಾರಸ್ಥರಿಗೆ ಈ ಬ್ಯಾಂಕ್ ನಿಂದ ಲಾಭ ಅಂತೂ ಇಲ್ಲ.ರಾಜ್ಯದಲ್ಲೇ ಮೊದಲ ಬಾರಿಗೆ ಬೀದಿ ಬದಿ ವ್ಯಾಪಾರಿಗಳೇ ಒಟ್ಟು ಸೇರಿ ಸಹಕಾರಿ ಸೊಸೈಟಿಯೊಂದನ್ನು ಆರಂಭಿಸಿದ್ದಾರೆ. ಮೀಟರ್ ಬಡ್ಡಿದಂಧೆಯವರಿಂದ ಬೀದಿ ಬದಿ ವ್ಯಾಪಾರಿಗಳನ್ನು ರಕ್ಷಣೆ ಮಾಡಲು ಸಂಘಟನಾತ್ಮಕವಾಗಿ ಒಟ್ಟಾಗಿದ್ದಾರೆ.

ಒಬ್ಬ ಸಾಮಾನ್ಯ ವರ್ಗದ ವ್ಯಕ್ತಿ ಏನಾದರೂ ಹೊಸ ಉದ್ಯಮ ಮಾಡಬೇಕಾದರೆ ಬಂಡವಾಳದ ಅವಶ್ಯಕತೆ ಇರುತ್ತೆ ಆದರೆ ಆ ವ್ಯಕ್ತಿ ಈ ಮೀಟರ್ ಬಡ್ಡಿ ,ಡೈಲಿ ಕಲೆಕ್ಷನ್ ನಿಂದ ಹಣ ಪಡೆದು ವ್ಯಾಪಾರದಲ್ಲಿ ಕೈಸುಟ್ಟು ಆತ್ಮಹತ್ಯೆ ಮಾಡಿದ ಘಟನೆ ಹೆಚ್ಚಾಗಿದ್ದು ಸರಕಾರ ಯಾವುದೇ ಯೋಜನೆ ಸಿಗದೇ ಕಂಗಾಲಾದ ಘಟನೆ ಇನ್ನು ಹೆಚ್ಚಿದೆ.

ವಿಟ್ಲದಲ್ಲೊಬ್ಬ ಖರ್ತನಾಕ್‌ ಮೀಟರ್‌ ಬಡ್ಡಿ ದಂಧೆಕೋರ ಬಡವರ ರಕ್ತ ಹೀರುವ ಬಿಗಿಲ್‌ ಸತೀಶನ ಬಗ್ಗೆ ಸಾಕಷ್ಟು ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ವಿಟ್ಲದ ಬಿಗಿಲ್‌ ಸತೀಶನ ಮೀಟರ್‌ ಬಡ್ಡಿಗೂ ಬ್ರೇಕ್‌ ಬೀಳಲಿದೆ ಎಂಬ ಮಾಹಿತಿ ಸಾರ್ವಜನಿಕರಿಂದ ಕೇಳಿ ಬಂದಿದೆ.

ಆದರೆ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಬೀದಿಬದಿ ವ್ಯಾಪಾರಿಗಳೇ ಒಟ್ಟು ಸೇರಿ ಸಹಕಾರ ಸಂಘವೊಂದನ್ನು ಪ್ರಾರಂಭಿಸಿದ್ದಾರೆ.ದಕ್ಷಿಣ ಕನ್ನಡ ಬೀದಿಬದಿ ವ್ಯಾಪಾರಸ್ಥರ ಸಹಕಾರ ಸಂಘ ಎಂಬ ಹೆಸರಿನ ಮೂಲಕ ಸಹಕಾರ ಇಲಾಖೆಯಲ್ಲಿ ನೋಂದಣಿ ಮಾಡಲಾಗಿದ್ದು,ಇಲ್ಲಿ ಬೀದಿ ಬದಿ ವ್ಯಾಪಾರಸ್ಥರೇ ಸೊಸೈಟಿಯ ಸದಸ್ಯರಾಗಿದ್ದು ಆರ್ಥಿಕ ಹಿತರಕ್ಷಣೆ ಮತ್ತು ಸ್ವಾವಲಂಬನೆಯ ಬದುಕಿನ ಉದ್ದೇಶಕ್ಕಾಗಿ ಇದನ್ನು ಪ್ರಾರಂಭಿಸಲಾಗಿದೆ ಎಂದು ಬೀದಿಬದಿ ವ್ಯಾಪಾರಸ್ಥರ ಸಹಕಾರ ಸಂಘದ ಅಧ್ಯಕ್ಷರಾದ ಬಿ.ಕೆ. ಇಮ್ತಿಯಾಜ್​ ತಿಳಿಸಿದ್ದಾರೆ.

ಈ ಮೀಟರ್ ಬಡ್ಡಿ ದಂಧೆಯವರಿಂದ ಅದೆಷ್ಟೋ ವ್ಯಾಪಾರಿಗಳು ಬಡ್ಡಿ ಕಟ್ಟಲಾಗದೇ ಸಂಕಷ್ಟಕ್ಕೆ ಒಳಗಾಗಿದ್ದರು. ಇದರ ಜೊತೆ ಕೆಲ ವ್ಯಾಪಾರಿಗಳು ದುಡಿದ ಹಣವನ್ನು ಕೆಲ ಯೋಜನೆಗಳಲ್ಲಿ ಹೂಡಿಕೆ ಮಾಡಿ ವಂಚನೆಗೆ ಒಳಗಾದ ಪ್ರಕರಣಗಳು ಅತಿಹೆಚ್ಚಿದೆ.ಬೀದಿ ಬದಿ ವ್ಯಾಪಾರಸ್ಥರು ಒಟ್ಟು ಸೇರಿ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ದಿ ಸಂಘ ಎಂಬ ಹೆಸರಿನಲ್ಲಿ ಹೊಸ ಸೊಸೈಟಿ ಯನ್ನು ಪ್ರಾರಂಭಿಸಲು ಹೊರಟಿದ್ದಾರೆ,ಇಲ್ಲಿ 1300ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು ಇದರಲ್ಲಿ ಕೇವಲ ಬೀದಿಬದಿ ವ್ಯಾಪಾರಿಗಳನ್ನು ಮಾತ್ರ ಸದಸ್ಯರನ್ನಾಗಿ ಮಾಡಿದ್ದಾರೆ.

ಯಾವುದೇ ಬಂಡವಾಳಶಾಹಿಗಳಿಗೆ ಮಣೆ ಹಾಕದೆ ಈ ಸೊಸೈಟಿಯ ಇಂದು ಪ್ರಾರಂಭವಾಗಿದ್ದು ಬೃಹತ್ ಕಾರ್ಯಕ್ರಮ ನಡೆಸಿ ಸದಸ್ಯರಿಗೆ ಷೇರು ಪ್ರಮಾಣಪತ್ರ ವಿತರಿಸಲಾಗಿದೆ.ಇದೆಲ್ಲದರ ನಡುವೆ ಬೀದಿಬದಿ ವ್ಯಾಪಾರಿಗಳು ಸಂಘಟನಾತ್ಮಕವಾಗಿ ಗಟ್ಟಿಯಾಗುವುದರ ಜೊತೆ ಆರ್ಥಿಕವಾಗಿಯೂ ಬಲಿಷ್ಠವಾಗಲು ಮುಂದಡಿ ಇಟ್ಟಿರೋದು ರಾಜ್ಯದ ಇತರ ಬೀದಿಬದಿ ವ್ಯಾಪಾರಿಗಳಿಗೆ ಮಾದರಿಯಾಗಿದ್ದಾರೆ.

- Advertisement -

Related news

error: Content is protected !!