Sunday, May 5, 2024
spot_imgspot_img
spot_imgspot_img

ಈ ಆಹಾರಗಳನ್ನು ಸೇವಿಸಿ, ಆಗ ಗ್ಯಾಸ್ಟ್ರಿಕ್ ಸಮಸ್ಯೆಯೇ ಬರಲ್ಲ!

- Advertisement -G L Acharya panikkar
- Advertisement -

ಅತಿಯಾದ ಗ್ಯಾಸ್ಟ್ರಿಕ್ ಸಮಸ್ಯೆ ಹಲವಾರು ಆರೋಗ್ಯ ತೊಂದರೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾಗುವಂತೆ ಮಾಡಿಕೊಳ್ಳಬಾರದು.
ಬಾಳೆಹಣ್ಣಿನಲ್ಲಿ ನೈಸರ್ಗಿಕವಾದ ರೂಪದಲ್ಲಿ ಪೊಟ್ಯಾಶಿಯಂ ಅಂಶ ಇರುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಗೆ ರಾಮಬಾಣವಾಗಿ ಇದು ಕೆಲಸ ಮಾಡುತ್ತದೆ. ಹೊಟ್ಟೆಯ ಒಳಪದರವನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡುವ ಜೊತೆಗೆ ದೇಹದ ಪಿಹೆಚ್ ಮಟ್ಟವನ್ನು ಅತ್ಯುತ್ತಮವಾಗಿ ಕಾಪಾಡುತ್ತದೆ. ಬಾಳೆ ಹಣ್ಣಿನಲ್ಲಿ ನಾರಿನ ಅಂಶ ಹೆಚ್ಚಾಗಿರುವುದರಿಂದ ಪದೇಪದೇ ಗ್ಯಾಸ್ಟ್ರಿಕ್ ಉಂಟಾಗುವ ಸಂಭವವನ್ನು ಇದು ತಪ್ಪಿಸುತ್ತದೆ. ಸಾಧ್ಯವಾದರೆ ಚೆನ್ನಾಗಿ ಹಣ್ಣಾದ ಬಾಳೆ ಹಣ್ಣುಗಳನ್ನು ಮಾತ್ರ ಉಪವಾಸದ ಸಂದರ್ಭದಲ್ಲಿ ಸೇವನೆ ಮಾಡಿ.

ಎಳನೀರಿನಲ್ಲಿ ಎಲೆಕ್ಟ್ರೋಲೈಟ್ ಅಂಶಗಳ ಪ್ರಮಾಣ ಹೆಚ್ಚಾಗಿರುವುದರಿಂದ ಇದು ದೇಹಕ್ಕೆ ಹಲವು ಬಗೆಯ ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ ಮತ್ತು ಉಪವಾಸದ ಸಂದರ್ಭದಲ್ಲಿ ವಿಶೇಷವಾಗಿ ದೇಹದ ಇಂತಹ ಆರೋಗ್ಯಕರ ಅಂಶಗಳನ್ನು ರಕ್ಷಣೆ ಮಾಡುತ್ತದೆ. ದೇಹದ ಆಮ್ಲೀಯತೆಯನ್ನು ಸಮತೋಲನಪಡಿಸಿ ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕುವಲ್ಲಿ ನೆರವಾಗುತ್ತದೆ.

ಗ್ಯಾಸ್ಟ್ರಿಕ್ ಸಂದರ್ಭದಿಂದ ಪಾರಾಗಲು ತಂಪಾದ ಹಾಲು ಸೇವನೆ ತುಂಬಾ ಪ್ರಯೋಜನಕಾರಿ ಎಂದು ಹೇಳುತ್ತಾರೆ. ನೀವು ಹಾಲನ್ನು ರೆಫ್ರಿಜರೇಟರ್ ನಲ್ಲಿ ಇಟ್ಟು ಸೇವನೆ ಮಾಡಿದರೂ ಪರವಾಗಿಲ್ಲ.

ನೈಸರ್ಗಿಕವಾದ ರೂಪದಲ್ಲಿ ಇದು ಕೆಲಸ ಮಾಡುವ ಕಾರಣದಿಂದ ಹೊಟ್ಟೆಯ ಭಾಗದಲ್ಲಿ ಉಂಟಾದ ಅತಿಯಾದ ಆಮ್ಲೀಯ ಪ್ರಭಾವವನ್ನು ದೂರಮಾಡುವುದು ಮಾತ್ರವಲ್ಲದೆ ದೀರ್ಘಕಾಲದ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಸಹ ಇದು ಪರಿಹಾರ ಮಾಡುತ್ತದೆ. ಉಪವಾಸ ಸಂದರ್ಭದಲ್ಲಿರುವ ಜನರಿಗೆ ಇದೊಂದು ಅತ್ಯಂತ ಅವಶ್ಯಕವಾದ ಡೈರಿ ಆಹಾರ ಪದಾರ್ಥ ಎಂದು ಹೇಳಬಹುದು.

ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮತ್ತು ಎದೆಯುರಿ ತೊಂದರೆಯಿಂದ ಕಾಪಾಡುವ ಲಕ್ಷಣವನ್ನು ಮೊಸರು ಮತ್ತು ಮಜ್ಜಿಗೆ ಹೊಂದಿವೆ.
ಅತಿಯಾದ ಆಮ್ಲೀಯತೆಯ ಕಾರಣದಿಂದ ದೀರ್ಘಕಾಲದಿಂದ ಕಿರಿಕಿರಿ ಅನುಭವಿಸುತ್ತಿರುವ ಜನರಿಗೆ ಆರೋಗ್ಯದ ಸ್ಥಿತಿಯನ್ನು ಹೋಗಲಾಡಿಸಿ ಆರಾಮದಾಯಕ ಅನುಭವವನ್ನು ಉಂಟು ಮಾಡುವ ನಿಟ್ಟಿನಲ್ಲಿ ಮೊಸರು ಮತ್ತು ಮಜ್ಜಿಗೆ ತುಂಬಾ ಪ್ರಯೋಜನಕಾರಿ.

ಕರ್ಬೂಜದ ಹಣ್ಣು ಸೇವಿಸಿ.ಕರ್ಬೂಜ ಹಣ್ಣಿನಲ್ಲಿ ದೇಹಕ್ಕೆ ಅಗತ್ಯವಾಗಿ ಬೇಕಾದ ಪೌಷ್ಟಿಕ ಸತ್ವಗಳು ಸಿಗುವ ಜೊತೆಗೆ ಹೆಚ್ಚಿನ ಪ್ರಮಾಣದ ಆಂಟಿಆಕ್ಸಿಡೆಂಟ್ ಅಂಶಗಳು ಕೂಡ ಇರುವ ಕಾರಣದಿಂದ ಹೊಟ್ಟೆಯ ಭಾಗದ ತೊಂದರೆಗಳನ್ನು ದೂರ ಮಾಡುವ ಜೊತೆಗೆ ಆಮ್ಲೀಯ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಇದರಿಂದ ಆಗಾಗ ಎದುರಾಗುವ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚು ಪ್ರಬಲತೆ ಹೊಂದಿರುವುದಿಲ್ಲ.

ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾದಾಗ ಸಾಮಾನ್ಯವಾಗಿ ಒಂದು ಲೋಟ ಬಿಸಿ ನೀರು ಕುಡಿದರೆ ಬಹಳ ಬೇಗನೆ ಪರಿಹಾರ ಸಿಗುತ್ತದೆ. ಏಕೆಂದರೆ ಬಿಸಿ ನೀರಿಗೆ ಎದೆಯುರಿ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಹೋಗಲಾಡಿಸುವ ಗುಣವಿದೆ.
ಅಷ್ಟೇ ಅಲ್ಲದೆ ದೇಹದಿಂದ ವಿಷಕಾರಿ ಅಂಶಗಳನ್ನು ಸಹ ಇದು ಹೊರಹಾಕುತ್ತದೆ. ಹೀಗಿದ್ದಾಗ ಹೊಟ್ಟೆ ಆರೋಗ್ಯವನ್ನು ಸಂಪೂರ್ಣ ಪ್ರಮಾಣದಲ್ಲಿ ರಕ್ಷಣೆ ಮಾಡಬಲ್ಲ ಶಕ್ತಿ ಬಿಸಿನೀರಿನಲ್ಲಿ ಸಿಗುತ್ತದೆ.

- Advertisement -

Related news

error: Content is protected !!