Sunday, June 14, 2026
spot_imgspot_img
spot_imgspot_img

ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ಗೌತಮ್ ಅದಾನಿ

- Advertisement -
- Advertisement -

ನವದೆಹಲಿ: ಹುರನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಯನ್ನು ಹಿಂದಕ್ಕಿ ಗೌತಮ್ ಅದಾನಿ ಮುಂಚೂಣಿಯಲ್ಲಿದ್ದಾರೆ.

11.2 ಲಕ್ಷ ಕೋಟಿ ರೂ. ಸಂಪತ್ತನ್ನು ಹೊಂದಿರುವ ಗೌತಮ್ ಅದಾನಿ ಹುರುನ್ ಇಂಡಿಯಾ 2024 ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿಯವರನ್ನು ಹಿಂದಿಕ್ಕುವ ಮೂಲಕ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

ಇನ್ನು ಈ ವರ್ಷದ ಜು.31 ರವರೆಗಿನ ಉದ್ಯಮಿಗಳ ಸಂಪತ್ತಿನ ಲೆಕ್ಕಾಚಾರವನ್ನು ಆಧರಿಸಿ 10.14 ಲಕ್ಷ ಕೋಟಿ ರೂ. ಸಂಪತ್ತನ್ನು ಹೊಂದಿರುವ ಮುಕೇಶ್ ಅಂಬಾನಿ ಎರಡನೇ ಸ್ಥಾನದಲ್ಲಿದ್ದಾರೆ.

ಅದಾನಿ ಮತ್ತು ಅಂಬಾನಿ ನಂತರ ಮೂರನೇ ಸ್ಥಾನದಲ್ಲಿ 3.14 ಲಕ್ಷ ಕೋಟಿ ರೂ. ಸಂಪತ್ತನ್ನು ಹೊಂದಿರುವ ಹೆಚ್‌ಸಿಎಲ್ ಟೆಕ್ನಾಲಾಜಿಸ್‌ನ ಶಿವ ನಡಾರ್ ಹಾಗೂ ಅವರ ಕುಟುಂಬ. ನಾಲ್ಕು ಮತ್ತು ಐದನೇ ಸ್ಥಾನಗಳಲ್ಲಿ ಕ್ರಮವಾಗಿ 2.89 ಲಕ್ಷ ಕೋಟಿ ರೂ. ಸಂಪತ್ತು ಹೊಂದಿರುವ ಸೈರಸ್ ಎಸ್ ಪೂನಾವಾಲಾ ಹಾಗೂ ಅವರ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಕುಟುಂಬ ಪಡೆದುಕೊಂಡಿದೆ.

- Advertisement -

Related news

error: Content is protected !!