Tuesday, August 4, 2026
spot_imgspot_img
spot_imgspot_img

ಮುಸುಕು ಹಾಕಿಕೊಂಡು ಬಂದು ಬಾಲಕನಿಗೆ ನೀಡಿದ ಇಂಜೆಕ್ಷನ್

- Advertisement -
- Advertisement -

ವಿಜಯಪುರ ತಾಲೂಕಿನ ಮುದ್ದೆಬಿಹಾಳ ತಾಲೂಕಿನಲ್ಲಿ 12 ವರ್ಷದ ಬಾಲಕ ಶಾಲೆಗೆ ಹೋಗುತ್ತಿರುವಾಗ ಇಬ್ಬರು ಮುಸುಕು ಹಾಕಿಕೊಂಡು ಬಂದು ಇಂಜೆಕ್ಷನ್ ಚುಚ್ಚಿದ್ದು, ಸಾರ್ವಜನಿಕರಿಗೆ ಆತಂಕ ಮೂಡಿಸಿದೆ.

ಇಂಜೆಕ್ಷನ್ ಚುಚ್ಚಿರುವುದು ತಿಳಿದ ತಕ್ಷಣ ಶಾಲೆ ಬಿಟ್ಟು ಮನೆಗೆ ಮರಳಿ ಬಾಲಕ ಮನಯವರಿಗೆ ವಿಷಯ ತಿಳಿಸಿದ್ದು, ತಕ್ಷಣ ಪೊಷಕರು ಅವನನ್ನು ಖಾಸಗಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದಾರೆ. ಖಾಸಗಿ ಆಸ್ಪತ್ರೆಯವರು ಸರ್ಕಾರಿ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದಾರೆ.

ಇನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಎಂಎಲ್ಸಿ ಪ್ರಕರಣದ ಅಡಿ ಹೆಸರು ನೋಂದಾಯಿಸಿಕೊಂಡು ವೈದ್ಯರು ಪರಿಶೀಲಿಸಿದಾಗ ಬಾಲಕ ಹೇಳುವ ಜಾಗದಲ್ಲಿ ಚುಚ್ಚಿದ ಗುರುತಿದೆ. ಆದರೆ ಅದು ಇಂಜೆಕ್ಷನ್ ಅಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಇದರಿಂದ ಗಾಬರಿಗೊಂಡ ಪಾಲಕರು ಪೊಲೀಸ್ ಠಾಣೆಗೆ ಆಗಮಿಸಿದ್ದು, ಪೊಲೀಸರು ಬಾಲಕ ಮತ್ತು ಪಾಲಕರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

- Advertisement -

Related news

error: Content is protected !!