- Advertisement -
- Advertisement -
ಬೆಂಗಳೂರು: ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಈಗ ತವರಿನಲ್ಲಿ ಪಾರ್ಟಿ ಮಾಡುತ್ತ ಜೀವನವನ್ನು ಆನಂದಿಸುತ್ತಿರುವ ಕ್ರಿಸ್ ಗೇಲ್, ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಕೆರಿಬಿಯನ್ ಡ್ಯಾನ್ಸ್ ವಿಡಿಯೋ ಈಗ ವೈರಲ್ ಆಗಿದೆ.40 ವರ್ಷದ ಕ್ರಿಸ್ ಗೇಲ್ ಕೆರಿಬಿಯನ್ ಸಂಗೀತವನ್ನು ಆನಂದಿಸುತ್ತ ಸಮಯ ಕಳೆಯುತ್ತಿದ್ದಾರೆ.
ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಬಳಿಕ ಗೇಲ್ ಯಾವುದೇ ಅಂತಾರಾಷ್ಟ್ರೀಯ ಪಂದ್ಯ ಆಡಿಲ್ಲ. ಈ ವರ್ಷ ಐಪಿಎಲ್‌ನಲ್ಲಿ ಅವರು ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಕಣಕ್ಕಿಳಿಯಬೇಕಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಕೆರಿಬಿಯನ್ ಡ್ಯಾನ್ಸ್ ಸ್ಟೆಪ್‌ಗಳ ವಿಡಿಯೋ ಈಗ ಅಭಿಮಾನಿಗಳ ಗಮನ ಸೆಳೆದಿದೆ.
- Advertisement -