- Advertisement -
- Advertisement -
ಮೂರು ಪಂದ್ಯಗಳ ಏಕದಿನ ಸರಣಿಯ ಆರಂಭಿಕ ಪಂದ್ಯ ಸೋತಿರುವ ಟೀಮ್ ಇಂಡಿಯಾ, ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಇಂದು ದ್ವಿತೀಯ ಪಂದ್ಯದ ಸವಾಲು ಸ್ವೀಕರಿಸಲಿದೆ. ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಈ ಪಂದ್ಯ ನಡೆಯಲಿದೆ.
ಏಕದಿನ ಸರಣಿಯಲ್ಲಿ ಭಾರತ 1-0ಯ ಹಿನ್ನಡೆ ಅನುಭವಿಸಿರುವುದರಿಂದ ಸರಣಿ ಉಳಿಸಿಕೊಳ್ಳಬೇಕಾದರೆ ದ್ವಿತೀಯ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕಾಗಿದೆ.ಇನ್ನು ಸಿಡ್ನಿ ಕ್ರಿಕೆಟ್ ಗ್ರೌಂಡ್ ಸಾಮಾನ್ಯವಾಗಿ ಬ್ಯಾಟ್ಸ್ಮನ್ಗಳಿಗೆ ನೆಚ್ಚಿನ ಪಿಚ್ ಆಗಿದ್ದು, ಆರಂಭಿಕ ಪಂದ್ಯದಲ್ಲೂ ಎರಡೂ ತಂಡಗಳು 300ರನ್ ಗಳಿಸಿದ್ದೇ ಇದಕ್ಕೆ ಸಾಕ್ಷಿಯಾಗಿದೆ. ಆದ್ರೆ ರಾತ್ರಿ ಅಥವಾ ಸಂಜೆ ವೇಳೆಗೆ ಪಿಚ್ ಕೊಂಚ ಬದಲಾಗುವ ಸಾಧ್ಯತೆಯಿದೆ ಅಂತ ಹೇಳಲಾಗಿದೆ. ಈ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 9:10ಕ್ಕೆ ಆರಂಭವಾಗಲಿದೆ.
- Advertisement -