Saturday, June 28, 2025
spot_imgspot_img
spot_imgspot_img

ವಿಟ್ಲ : ತಾಲೂಕು ಮಟ್ಟದ ಪದವಿಪೂರ್ವ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ವಿಠಲ ಪದವಿ ಪೂರ್ವ ಕಾಲೇಜಿನ ಬಾಲಕಿಯರು ದ್ವಿತೀಯ ಸ್ಥಾನ

- Advertisement -
- Advertisement -

ವಿಟ್ಲ : ಬಂಟ್ವಾಳ ತಾಲೂಕು ಮಟ್ಟದ ಪದವಿಪೂರ್ವ ವಿಭಾಗದ ಕಬಡ್ಡಿ ಪಂದ್ಯಾಟವು ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದ್ದು ವಿಠಲ ಪದವಿ ಪೂರ್ವಕಾಲೇಜಿನ ಬಾಲಕಿಯರು ದ್ವಿತೀಯ ಸ್ಥಾನ (ರೇಖಾ, ರೇಷ್ಮಾ, ಸುಶ್ಮಿತಾ, ಸಿಂಚನ. ವಿ, ಅಶ್ವಿತಾ, ಹಿತ, ವಿನ್ಯಾ, ವರ್ಷಿಣಿ, ಸ್ಪೂರ್ತಿ, ಪಲ್ಲವಿ ಜಿ. ಎಸ್ )ಪಡೆದಿದ್ದಾರೆ.

ರೇಖಾ ಬೆಸ್ಟ್ ರೈಡರ್ ಆಗಿದ್ದು ನಾಲ್ಕು ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ .ಇವರಿಗೆ ವಿಠ್ಠಲ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀನಿವಾಸ ಗೌಡ ತರಬೇತಿ ನೀಡಿದ್ದಾರೆ. ವಿಶ್ವನಾಥ್ ಅಳಿಕೆ, ರಶೀದ್ ಬನಾರಿ , ವಿಶ್ವರಾಜ್ ವಿಟ್ಲ, ಲೋಕಾನಂದ ವಿಟ್ಲ ಸಹಕರಿಸಿದ್ದಾರೆ. ತಂಡದ ವ್ಯವಸ್ಥಾಪಕರಾಗಿ ಕೃಪಾ ಸಹಕರಿಸಿದ್ದಾರೆ. ಬಾಲಕಿಯರ ಸಾಧನೆಯನ್ನು ಆಡಳಿತ ಮಂಡಳಿ, ಆಡಳಿತಾಧಿಕಾರಿ, ಪ್ರಾಂಶುಪಾಲರು, ಶಿಕ್ಷಕ ಶಿಕ್ಷಕೇತರ ವೃಂದವು ಅಭಿನಂದಿಸಿದೆ..

- Advertisement -

Related news

error: Content is protected !!