Monday, July 20, 2026
spot_imgspot_img
spot_imgspot_img

ಜಾಗತಿಕ ತೈಲ, ಅನಿಲ ಬಿಕ್ಕಟ್ಟು; ಸರ್ಕಾರದಿಂದ ಅಗತ್ಯ ಸರಕುಗಳ ಕಾಯ್ದೆಯ ಸೆಕ್ಷನ್ 3 ಜಾರಿ

- Advertisement -
- Advertisement -

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಭಾರತದ ಮೇಲೂ ಹಲವು ಸಮಸ್ಯೆ ತಂದೊಡ್ಡಿದೆ. ಕಚ್ಚಾತೈಲ, ಗ್ಯಾಸ್ ಸಮಸ್ಯೆ ಬಳಿಕ ಷೇರುಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಠಿಯಾಗುತ್ತಿದ್ದು, ರೂಪಾಯಿ ಮೌಲ್ಯವೂ ಕುಸಿಯುತ್ತಿದೆ. ಈ ನಡುವೆ ಬ್ಲ್ಯಾಕ್ ಮಾರ್ಕೆಟ್ ಮೇಲೆ ನಿಗಾ ವಹಿಸಲು ಸರ್ಕಾರ ಅಗತ್ಯ ಸರಕುಗಳ ಕಾಯ್ದೆಯ ಸೆಕ್ಷನ್ 3 ಜಾರಿ ಮಾಡಿದೆ.

ಅಮೆರಿಕ-ಇಸ್ರೇಲ್‌, ಇರಾನ್ ಸಂಘರ್ಷ 21 ದಿನಕ್ಕೆ ಕಾಲಿಟ್ಟಿದ್ದು, ಯುದ್ಧ ಇನ್ನಷ್ಟು ದಿನಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ, ಭಾರತದಲ್ಲಿ ಪೆಟ್ರೋಲ್ ಡೀಸೆಲ್ ಸೇರಿದಂತೆ ಗ್ಯಾಸ್ ಸಮಸ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆ ಗ್ಯಾಸ್ ಅನ್ನು ಅಗತ್ಯ ಸರಕುಗಳ ಕಾಯ್ದೆಗೆ ಸೇರಿಸಿದ್ದ ಸರ್ಕಾರ ಈಗ, ಅಗತ್ಯ ಸರಕುಗಳ ಕಾಯ್ದೆಯ ಸೆಕ್ಷನ್ 3 ಅನ್ನು ಜಾರಿಗೊಳಿಸಿದೆ.

ಸೆಕ್ಷನ್ 3ರ ಜಾರಿಯಿಂದ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ನೈಸರ್ಗಿಕ ಅನಿಲದ ಉತ್ಪಾದನೆ, ಸಂಸ್ಕರಣೆ, ಸಂಸ್ಕರಣೆ, ಸಂಗ್ರಹಣೆ, ಆಮದು, ರಫ್ತು, ಮಾರುಕಟ್ಟೆ ಮತ್ತು ಬಳಕೆಯಲ್ಲಿ ತೊಡಗಿರುವ ಎಲ್ಲಾ ಕಂಪನಿಗಳು ಮಾಹಿತಿಯನ್ನು ಸರ್ಕಾರದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶದೊಂದಿಗೆ ನವೀಕೃತ ಡೇಟಾವನ್ನು ಹಂಚಿಕೊಳ್ಳುವುದು ಕಡ್ಡಾಯವಾಗಲಿದೆ.

ಗಲ್ಫ್ ಪ್ರದೇಶದಲ್ಲಿನ ಕೆಲವು ವಾಯುಪ್ರದೇಶಗಳನ್ನು ತಪ್ಪಿಸುವಂತೆ ಸೂಚನೆ- ಇರಾನ್ ಗಲ್ಫ್ ದೇಶಗಳ ಮೇಲೆ ದಾಳಿ ಮುಂದುವರಿಸಿರುವ ಹಿನ್ನೆಲೆ ಗಲ್ಫ್ ಪ್ರದೇಶದಲ್ಲಿನ ಕೆಲವು ವಾಯುಪ್ರದೇಶಗಳನ್ನು ತಪ್ಪಿಸುವಂತೆ ವಿಮಾನಯಾನ ಸಂಸ್ಥೆಗಳಿಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯದಿಂದ ಸೂಚನೆ ನೀಡಿದೆ. ಬಹ್ರೇನ್, ಇರಾನ್, ಇರಾಕ್, ಇಸ್ರೇಲ್, ಜೋರ್ಡಾನ್, ಕುವೈತ್, ಲೆಬನಾನ್, ಕತಾರ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ವಾಯುಪ್ರದೇಶಗಳನ್ನು ತಪ್ಪಿಸುವಂತೆ ಹಾಗೂ ಓಮನ್ ಮತ್ತು ಸೌದಿ ಅರೇಬಿಯಾ ವಾಯುಪ್ರದೇಶದೊಳಗೆ FL 320 ಅಥವಾ 32,000 ಅಡಿಗಳಿಗಿಂತ ಕಡಿಮೆ ಕಾರ್ಯನಿರ್ವಹಿಸದಂತೆ ಸಲಹೆ ನೀಡಲಾಗಿದೆ ಎಂದು ವರದಿಯಿಂದ ತಿಳಿದುಬಂದಿದೆ.

- Advertisement -

Related news

error: Content is protected !!