- Advertisement -
- Advertisement -
ಬಂಟ್ವಾಳ: ಬಂಟ್ವಾಳ ತಾಲೂಕಿನ ಪುತ್ತೂರು ನಗರ ಠಾಣಾ ವ್ಯಾಪ್ತಿಯ ಕೆದಿಲ ಗ್ರಾಮದ ಗಡಿಯಾರ ಎಂಬಲ್ಲಿ
ಪ್ರತಿಷ್ಠಿತ ಚೋಯಿಸ್ ಬೀಡಿ ಮಾಲಕ, ಕಾಂಗ್ರೆಸ್ ಧುರೀಣ, ಚೋಯಿಸ್ ಉಮ್ಮಾರಬ್ಬ ಅವರ ಸಹೋದರ ಅಬ್ಬು ಬ್ಯಾರಿ ಎಂಬವರ ಮನೆಯಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿ ಖಾನೆಗೆ ಹಿಂದು ಜಾಗರಣ ವೇದಿಕೆಯ ಅಧಿಕೃತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪುತ್ತೂರು ನಗರ ಠಾಣಾ ಇನ್ಸ್‌ಪೆಕ್ಟರ್ ಶ್ರೀ ತಿಮ್ಮಪ್ಪ ನಾಯ್ಕ ಸಹಿತ ಅವರ ತಂಡದ ಪೋಲೀಸರು ಮನೆಯ ಮಾಲಿಕ ಅಬ್ಬು ಹಾಗು ಕಡೇಶಿವಾಲಯ ಗ್ರಾಮದ ನಚ್ಚಿಬೊಟ್ಟುವಿನ ನಾಲ್ವರು ವ್ಯಕ್ತಿಗಳು ಸಹಿತ ಐವರನ್ನು ಬಂದಿಸಿದ್ದಾರೆ.
ಗೋಮಾಂಸ ಹಾಗು ಉಪಯೋಗಿಸಲಾದ ಸಲಕರಣೆಗಳನ್ನು ವಶಪಡಿಸಲಾಗಿದೆ.
ನಚ್ಚಿಬೊಟ್ಟಿನ ವ್ಯಕ್ತಿಗಳ ಮೇಲೆ ಇತ್ತೀಚೆಗಷ್ಟೆ ಅಕ್ರಮ ಕಸಾಯಿಖಾನೆಯ ವಿರುದ್ದ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅವರು ಮತ್ತೆ ಗಡಿಯಾರದಲ್ಲಿ ಈ ದಂಧೆ ಮುಂದುವರಿಸಿದ್ದಾರೆ.
- Advertisement -