Friday, August 19, 2022
spot_imgspot_img
spot_imgspot_img

ಚಿನ್ನಕ್ಕೆ ಚುಂಬಿಸಿದ ಮನೀಶ್.! ಎರಡು ಪದಕ ಗೆದ್ದ ಸಿಂಗ್‌ರಾಜ್

- Advertisement -G L Acharya G L Acharya
- Advertisement -

ಜಪಾನ್‌ನ ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ 2020 ರಲ್ಲಿ ಭಾರತೀಯ ಕ್ರೀಡಾಳುಗಳು ಹಿಂದೆಂದಿಗಿಂತಲೂ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಇಂದು (ಸೆ. 4) ಸಹ ಪದಕದ ಭೇಟೆ ಆರಂಭವಾಗಿದೆ. ಒಂದೇ ವಿಭಾಗದ ಸ್ಪರ್ಧೆಯಲ್ಲಿ ಇಬ್ಬರು ಕ್ರೀಡಾಳುಗಳು ಚಿನ್ನ, ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.

ಮಿಶ್ರ 50 ಮೀಟರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಮನೀಶ್ ನರ್ವಾಲ್ ಚಿನ್ನಕ್ಕೆ ಮತ್ತು ಸಿಂಗ್ ರಾಜ್ ಬೆಳ್ಳಿಗೆ ಮುತ್ತಿಟ್ಟಿದ್ದಾರೆ. ಮನೀಶ್ ನರ್ವಾಲ್ ಶೂಟಿಂಗ್ ವಿಭಾಗದಲ್ಲಿ ಹೊಸ ದಾಖಲೆಯನ್ನೇ ಬರೆದು ಚಿನ್ನಕ್ಕೆ ಚುಂಬಿಸಿದರು. 218. 2 ಅಂಕಗಳೊಂದಿಗೆ ಚಿನ್ನ ಗೆದ್ದು ಸಂಭ್ರಮಿಸಿದರು. 216.7 ಅಂಕಗಳೊಂದಿಗೆ ಸಿಂಗ್‌ರಾಜ್ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಸಿಂಗ್ ರಾಜ್ ಅವರು ಟೋಕಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಎರಡು ಪದಕ ಗೆದ್ದ ಎರಡನೇ ಭಾರತೀಯರಾಗಿ ಹೊರಹೊಮ್ಮಿದರು.

ಈ ಮೂಲಕ 3 ಚಿನ್ನ, 7 ಬೆಳ್ಳಿ, 5 ಕಂಚಿನ ಪದಕ ಭಾರತದ ಪಾಲಾಗಿದೆ.

ಚಿನ್ನದತ್ತ ಪ್ರಮೋದ್ ಭಗತ್.!
ಬ್ಯಾಡ್ಮಿಂಟನ್ ಪುರುಷರ SL3 ವಿಭಾಗದಲ್ಲಿ ವಿಶ್ವ ನಂ.1 ಆಟಗಾರ ಭಾರತದ ಪ್ರಮೋದ್ ಭಗತ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಶನಿವಾರ ನಡೆದ ಸೆಮಿಫೈನಲ್ ಮುಖಾಮುಖಿಯಲ್ಲಿ ಭಗತ್ ಅವರು ಜಪಾನ್‌ನ ಡೈಕೆ ಫುಜಿಹಾರ ವಿರುದ್ಧ 21-11, 21-16ರ ಅಂತರದಲ್ಲಿ ಗೆದ್ದು ಫೈನಲ್‌ಗೆ ಪ್ರವೇಶಿಸಿದರು. ಬೆಳ್ಳಿ ಪದಕವನ್ನು ಕಾಯ್ದಿರಿಸಿದ ಭಗತ್ ಚಿನ್ನದ ಭೇಟೆಗೆ ಸಜ್ಜಾಗಿದ್ದಾರೆ.

- Advertisement -

Related news

error: Content is protected !!