Monday, August 10, 2026
spot_imgspot_img
spot_imgspot_img

ಪೆರುವಾಯಿ: ಮುಚ್ಚಿರಪದವು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ

- Advertisement -
- Advertisement -

ಕರ್ನಾಟಕದ ಪ್ರತಿಷ್ಠಿತ ಪುಸ್ತಕ ಮಳಿಗೆ ಎಸ್ ಎಲ್ ವಿ ಬುಕ್ ಹೌಸ್ ವತಿಯಿಂದ ಉಚಿತ ನೋಟ್ ಬುಕ್ ವಿತರಣೆ

ಪೆರುವಾಯಿ: ಕರ್ನಾಟಕದ ಪ್ರತಿಷ್ಠಿತ ಪುಸ್ತಕ ಮಳಿಗೆ ಎಸ್ ಎಲ್ ವಿ ಬುಕ್ ಹೌಸ್ ವತಿಯಿಂದ ಮುಚ್ಚಿರಪದವು ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಶಾಲಾ ಹಳೆ ವಿದ್ಯಾರ್ಥಿ ಅಶ್ವಿನಿ ಪೆರುವಾಯಿ, ಪುಷ್ಪರಾಜ್ ಮುಚ್ಚಿರಪದವು, ಶಿಕ್ಷಕಿಯರಾದ ಶ್ರೀಮತಿ ಗೌತಮಿ, ಶ್ರೀಮತಿ ಪ್ರಮೀಳಾ, ಹಾಗೂ ಧನುಶ್ರೀ ಸೇರಿದಂತೆ ಪೋಷಕರು ಶಾಲಾ ಮಕ್ಕಳು ಉಪಸ್ಥಿತರಿದ್ದರು.

ಉದ್ಯಮಿ ದಿವಾಕರ್ ದಾಸ್ ನೆರ್ಲಾಜೆ ಮಾಲಕತ್ವದ ಎಸ್ ಎಲ್ ವಿ ಬುಕ್ ಹೌಸ್ ಸಂಸ್ಥೆ ರಾಜ್ಯದ ಪುತ್ತೂರು, ಮಂಗಳೂರು , ಬಿಜೈ, ಮಾರ್ನಮಿಕಟ್ಟೆ, ಮೇರಿಹಿಲ್, ಮೂಡಬಿದ್ರೆ, ಮೈಸೂರು, ಚಾಮರಾಜನಗರ ಹಾಗೂ ಕುಶಾಲನಗರದಲ್ಲಿ ತನ್ನ ಮಳಿಗೆಯನ್ನು ಹೊಂದಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಪಟ್ಟ ಎಲ್ಲಾ ಸ್ಟೇಷನರಿಗಳು, ಗಿಫ್ಟ್ ಐಟಂ, ನೋಟ್ ಬುಕ್, ಪಠ್ಯ ಪುಸ್ತಕಗಳು ದೊರೆಯುತ್ತದೆ.

ವಿದ್ಯಾರ್ಥಿಗಳಿಗೆ ಸಹಕಾರಿಯಾಗಲೆಂದು ಬ್ಯಾಕ್ ಟೂ ಸ್ಕೂಲ್ ಆಫರ್‍ ಅನ್ನು ಸಂಸ್ಥೆ ನೀಡುತ್ತಿದ್ದು ಆ ಮೂಲಕ ಖರೀದಿ ಮೇಲೆ 4೦% ವರೆಗೆ ಡಿಸ್ಕೌಂಟ್ ಲಭಿಸಲಿದೆ.

- Advertisement -

Related news

error: Content is protected !!