Thursday, June 25, 2026
spot_imgspot_img
spot_imgspot_img

ಇಂದಿನಿಂದ ಚಿನ್ನದ ಮೇಲೆ ಹಾಲ್ ಮಾರ್ಕ್ ಕಡ್ಡಾಯ..!

- Advertisement -
- Advertisement -

ಮುಂಬೈ: ಚಿನ್ನದ ಆಭರಣಗಳು ಮತ್ತು ಇತರ ಚಿನ್ನದ ವಸ್ತುಗಳ ಮೇಲೆ ಹಾಲ್ ಮಾರ್ಕ್ ನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಆಭರಣಗಳನ್ನು ಖರೀದಿಸುವಾಗ ಹಾಲ್ ಮಾರ್ಕ್ ಇದ್ದರೆ ಅದರ ಮೇಲೆ ನಮ್ಮ ನಂಬಿಕೆ, ವಿಶ್ವಾಸ ಹೆಚ್ಚಾಗುತ್ತದೆ. ಹಾಲ್ ಮಾರ್ಕ್ ಇರುವ ಚಿನ್ನ ಶುದ್ಧವಾಗಿದ್ದು ಭಾರತದ ಎಲ್ಲಿಯಾದರೂ ನೀವು ಖರೀದಿಸಬಹುದು ಎನ್ನುವುದು ಎಲ್ಲರ ನಂಬಿಕೆಯಾಗಿದೆ.

ಸರ್ಕಾರದ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಭಾರತದ ಚಿನ್ನ ಮತ್ತು ಜ್ಯುವೆಲ್ಲರಿ ಒಕ್ಕೂಟದ ಮುಂಬೈ ಶಾಖೆಯ ಮುಖ್ಯಸ್ಥ, ಸರ್ಕಾರದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಎಂದಿದೆ. ಹಾಲ್ ಮಾರ್ಕ್ ಇರುವ ಚಿನ್ನವನ್ನು ಮಾರಾಟ ಮಾಡಿದರೆ ನಮ್ಮ ಮೇಲೆ ಜನರ ವಿಶ್ವಾಸ ಹೆಚ್ಚುತ್ತದೆ.

ಆದರೆ ಹಾಲ್ ಮಾರ್ಕ್ ಇಲ್ಲದಿರುವ ಜ್ಯುವೆಲ್ಲರಿಗಳನ್ನು ಮಾರಾಟ ಮಾಡಲು ಸರ್ಕಾರ ನಮಗೆ ಹೆಚ್ಚು ಸಮಯ ಕೊಡಬೇಕು ಎಂಬ ಬೇಡಿಕೆ ಈಗಾಗಲೇ ಹಾಲ್ಮಾರ್ಕ್ ಇಲ್ಲದ ಚಿನ್ನ ಸ್ಟಾಕ್ ಮಾಡಿಟ್ಟುಕೊಂಡ ಚಿನ್ನದ ಅಂಗಡಿಯವರು ಹೇಳುತ್ತಿದ್ದಾರೆ.

ಹಾಲ್ ಮಾರ್ಕ್ ಇಲ್ಲದಿರುವ ಆಭರಣಗಳನ್ನು ಜ್ಯುವೆಲ್ಲರಿ ಅಂಗಡಿಗಳು ಮತ್ತು ಮಳಿಗೆಗಳಲ್ಲಿ ಮಾರಾಟ ಮಾಡಲು ಇನ್ನೂ ಅವಕಾಶ ಇದ್ದು, ಖರೀದಿಸಿದವರು ಅದಕ್ಕೆ ಹಾಲ್ ಮಾರ್ಕ್ ಹಾಕಿಸಿ ಹೊಸ ಜ್ಯುವೆಲ್ಲರಿಯಾಗಿ ಮಾಡಿ ಗುಣಮಟ್ಟ ಕಾಪಾಡಿಕೊಳ್ಳಬೇಕಾಗುತ್ತದೆ ಎಂದು ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಸ್ ನ ಡಿಜಿ ಪ್ರಮೋದ್ ಕುಮಾರ್ ತಿವಾರಿ ತಿಳಿಸಿದ್ದಾರೆ.

- Advertisement -

Related news

error: Content is protected !!