Saturday, May 18, 2024
spot_imgspot_img
spot_imgspot_img

ಎರಡು ಲಕ್ಷದವರೆಗಿನ ಚಿನ್ನಾಭರಣ ಖರೀದಿಗೆ ಯಾವುದೇ ದಾಖಲೆ ಬೇಡ – ಕೇಂದ್ರ ಸರ್ಕಾರ

- Advertisement -G L Acharya panikkar
- Advertisement -

ನವದೆಹಲಿ: ಎರಡು ಲಕ್ಷ ಮೊತ್ತಕ್ಕಿಂತ ಕಡಿಮೆ ಮೌಲ್ಯದ ಚಿನ್ನಾಭರಣ ಖರೀದಿಗೆ ಯಾವುದೇ ದಾಖಲೆಯ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಎರಡು ಲಕ್ಷ ರೂ. ಮೊತ್ತಕ್ಕಿಂತ ಕಡಿಮೆಯ ಚಿನ್ನ, ಬೆಳ್ಳಿ, ಆಭರಣ ಅಥವಾ ಅಮೂಲ್ಯ ಹರಳು ಮತ್ತು ಕಲ್ಲುಗಳ ಖರೀದಿಗೆ ಪಾನ್‌ ನಂಬರ್‌ ಅಥವಾ ಆಧಾರ್‌ ಸಂಖ್ಯೆ ಒದಗಿಸುವುದು ಕಡ್ಡಾಯವಲ್ಲ ಎಂದು ವಿತ್ತ ಸಚಿವಾಲಯದ ಕಂದಾಯ (ಡಿಒಆರ್‌) ವಿಭಾಗ ಸ್ಪಷ್ಟ ಪಡಿಸಿದೆ. ಪಿಎಂಎಲ್‌ ಆಯಕ್ಟ್, 2002ರಡಿ 2020ರ ಡಿ. 28ರಂದು ಡಿಒಆರ್‌ ಈ ಬಗ್ಗೆ ಆದೇಶ ಹೊರಡಿಸಿದೆ.

ಈ ಮೂಲಕ ಚಿನ್ನ ಖರೀದಿ ಕುರಿತಂತೆ ಉಂಟಾಗಿದ್ದ ಗೊಂದಲಕ್ಕೆ ಕೇಂದ್ರ ಸರ್ಕಾರ ತೆರೆ ಎಳೆದಿದೆ. ಎರಡು ಲಕ್ಷ ರೂಪಾಯಿಗಿಂತ ಕಡಿಮೆ ಮೌಲ್ಯದ ಚಿನ್ನ ಖರೀದಿ ವೇಳೆ ಆಧಾರ್ ಕಾರ್ಡ್ , ಪಾನ್ ಕಾರ್ಡ್ ಸೇರಿದಂತೆ ಯಾವುದೇ ದಾಖಲೆಯ ಪ್ರತಿ ನೀಡಬೇಕಾದ ಅಗತ್ಯ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

- Advertisement -

Related news

error: Content is protected !!