Friday, April 26, 2024
spot_imgspot_img
spot_imgspot_img

ಆಭರಣ ಪ್ರಿಯರಿಗೆ ಸಿಹಿ ಸುದ್ದಿ: ಚಿನ್ನ, ಬೆಳ್ಳಿಯ ಬೆಲೆ ಮತ್ತೆ ಇಳಿಕೆ

- Advertisement -G L Acharya panikkar
- Advertisement -

ನವದೆಹಲಿ: ಕಳೆದ ಕೆಲವು ದಿನಗಳಿಂದ ಇಳಿಕೆಯತ್ತಾ ಮುಖ ಮಾಡಿರುವ ಚಿನ್ನದ ಬೆಲೆ ಇಂದು ಕೂಡ ಕಮ್ಮಿಯಾಗಿದೆ. ಆ ಮೂಲಕ ಆಭರಣ ಪ್ರಿಯರಿಗೆ ಖುಷಿ ನೀಡಿದೆ. ಹಾಗಾದ್ರೆ, ಇಂದಿನ ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ? ಅನ್ನೋ ವಿವರ ಕೆಳನಂತಿದೆ.

ಭಾರತೀಯ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಇಂದು ಮತ್ತೆ ಕುಸಿದಿದ್ದು, ಎಂಸಿಎಕ್ಸ್‌ʼನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ 0.3% ಇಳಿಕೆಯಾಗಿದೆ. ಅದರಂತೆ , ಈ ಮೂಲಕ 24 ಕ್ಯಾರೆಟ್‌ʼನ 10 ಗ್ರಾಂ. ಚಿನ್ನದ ಬೆಲೆ ಸಧ್ಯ 44,731 ರೂಪಾಯಿ ಆಗಿದೆ.

ಇನ್ನು ಬೆಳ್ಳಿಯ ಬೆಲೆಯಲ್ಲೂ ಕುಸಿತ ಕಂಡಿದ್ದು, 0.5% ಇಳಿಕೆಯಾಗಿದೆ. ಈ ಮೂಲಕ ಕೆಜಿ ಬೆಳ್ಳಿಗೆ 67,177 ಆಗಿದೆ. ಇಲ್ಲಿಯವರೆಗೆ, ಚಿನ್ನದ ಬೆಲೆ ಸುಮಾರು 11 ತಿಂಗಳ ಕನಿಷ್ಠಕ್ಕೆ ಇಳಿದಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಚಿನ್ನವು 57,000 ಕ್ಕೆ ತಲುಪಿತ್ತು.

- Advertisement -

Related news

error: Content is protected !!